Good news : ಪೂರ್ಣಗೊಳ್ತಿರೋ ರೈಲ್ವೆ ಮೇಲ್ಸೇತುವೆ ಕಾಮಗಾರಿ! ವೈರಲ್​ ಆಗ್ತಿದೆ ಈ ಸುದ್ದಿ!

ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಕಾಮಗಾರಿಗಳು ಇದೇ ಫೆಬ್ರವರಿ 27 ಕ್ಕೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಸಾವಿರಾರು ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ಧಾರೆ. ಈ ಪೈಕಿ ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆಗಳು ಮುಖ್ಯವಾದವು. ಸದ್ಯ  ವಿದ್ಯಾನಗರದ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ (Railway Over Bridge) ಕಾಮಗಾರಿಯ ಡ್ರೋಣ್ ಫೋಟೊಗಳು ವೈರಲ್​ ಆಗುತ್ತಿದೆ. 

ಹೊಲಕ್ಕೆ ಬಿದ್ದ ಬೆಂಕಿ! 10 ಲಕ್ಷ ರೂಪಾಯಿ ನಷ್ಟ!

ಸುತ್ತಿಬಳಸಿ ಸಾಗುವ ಅನುಭವ ನೀಡುವ ಈ ಮೇಲ್ಸೇತುವೆ ಹೊಳೆಹೊನ್ನೂರು ರಸ್ತೆ ಹಾಗೂ ಬಿ.ಹೆಚ್​.ರೋಡ್​ಗೆ ಸಂಪರ್ಕ ರಸ್ತೆಯಾಗಿದೆ. ಇದು ಉದ್ಘಾಟನೆಗೊಂಡ ನಂತರ, ಈ ಭಾಗದಲ್ಲಿನ ಜನರು ನೇರವಾಗಿ ರೈಲ್ವೆ ಗೇಟ್​ನ ಅಡೆತಡೆಯಿಲ್ಲ ಹೊಳೆಹೊನ್ನೂರು ರಸ್ತೆಯ ಕಡೆಗೆ ಸಾಗಬಹುದಾಗಿದೆ. ಪರಿಣಾಮ ಟ್ರಾಫಿಕ್​ ಸಮಸ್ಯೆಯು ಬಗೆಹರಿಯಲಿದೆ. ಸುಮಾರು 40 ಕೋಟಿಯ ಕಾಮಗಾರಿ ಇದಾಗಿದೆ. 

*Shimoga Sogane airport : ಮೋದಿ ಆಗಮನಕ್ಕೆ ಕಾಯುತ್ತಿದೆ ಶಿವಮೊಗ್ಗವಿಮಾನ ನಿಲ್ದಾಣ! ಉದ್ಘಾಟನೆಗೆ ಸಿದ್ದಗೊಂಡ AIRPORTನ ಡ್ರೋಣ್ ದೃಶ್ಯ ನೋಡಿದ್ರಾ*

ಅತ್ತ ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ನಡೆಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೂಡ ಅಂತಿಮ ಹಂತಕ್ಕೆ ಬಂದು ತಲುಪಿದೆ.  ಕಳೆದೊಂದು ತಿಂಗಳಿನಿಂದ ಕಾಮಗಾರಿ ಗೆ ವೇಗ ನೀಡಲಾಗಿದ್ದು, ಹೊರರಾಜ್ಯಗಳ ಕಾರ್ಮಿಕರನ್ನು ಬಳಸಿಕೊಂಡು ಹಗಲಿರುಳು ಮೇಲ್ಸೆತುವೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ 

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment