Doddapet police station : ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ವೊಂದು ದಾಖಲಾಗಿದೆ. ದಾಖಲಾಗಿರುವ ದೂರು ಹಾಗೂ ಎಫ್ಐಆರ್ ಪ್ರಕಾರ, ಮದರಸಾ ಒಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದವರೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಮಾಡಲಾಗಿದೆ.
*Shimoga: ಮಹಿಳೆ ನೇಣಿಗೆ ಶರಣಾದ ಪ್ರಕರಣದಲ್ಲಿ ಆರೋಪಿ ಪ್ರಿಯಕರ ಬಂಧನ! ಡೆತ್ನೋಟ್ನಲ್ಲಿತ್ತು ಸತ್ಯ!*
ನಡೆದಿದ್ದು ಏನು?
ಮದರಸಾ ಒಂದರ ಶಿಕ್ಷಕರು ಮಾಟ ಮಂತ್ರವನ್ನು ಬಿಡಿಸುವ ವಿದ್ಯೆಯನ್ನು ಸಹ ಕಲಿತಿದ್ದು, ಅವರ ಬಳಿ ಬಂದವರಿಗೆ ಈ ನಿಟ್ಟಿನಲ್ಲಿ ಪೂಜೆ ಮಾಡಿ ಭೂತ ಬಿಡಿಸ್ತಿದ್ದರಂತೆ. ಇದರ ಬಗ್ಗೆ ತಿಳಿದಿದ್ದ ಇಬ್ಬರು ವ್ಯಕ್ತಿಗಳು ಬಂದು, ಅವರ ಪೈಕಿಯಲ್ಲಿಯೇ ಒಬ್ಬರಿಗೆ ಭೂತ ಹಿಡಿದಿದೆ ಬಿಡಿಸಬೇಕು ಎಂದಿದ್ದಾರೆ. ಅಲ್ಲದೆ ಇದಕ್ಕಾಗಿ ಹಣ ಕೊಡುವುದಾಗಿ ತಿಳಿಸಿದ್ದರಂತೆ. ಅದರಂತೆ ಮದರಸಾದ ಶಿಕ್ಷಕರು, ಹೋಗಿ ಪ್ರಾರ್ಥನೆ ಮಾಡಿ, ಏನೇನು ವಿದಿಯಿದೆಯೋ ಅದನ್ನೆಲ್ಲಾ ಮಾಡಿ ಬಂದಿದ್ದಾರೆ. ಆದರೆ ಆ ದಿನ ಬಿಟ್ಟು ಮರುದಿನ ಮತ್ತೆ ಬಂದ ಇಬ್ಬರು, ನೀವು ಡೋಂಗಿ ಬಾಬಾ, ಮಂತ್ರವಾದ ಮಾಡಿದ್ದರ ವಿಡಿಯೋ ಮಾಡಿದ್ದೇವೆ, ಒಂದುವರೆ ಲಕ್ಷ ಕೊಡಿ, ಇಲ್ಲವಾದರೆ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಶಿಕ್ಷಕರು ನೇರವಾಗಿ ದೂರು ಕೊಟ್ಟಿದ್ದು, ಸದ್ಯಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com