BREAKING NEWS: : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ (Thirthahalli) ಕಾನೂನು ಬಿಜೆಪಿ ಪರವಾಗಿ ನಿಂತಿದೆ ಅಂತಾ ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದೆ. ಇದರ ನಡುವೆ ತೀರ್ಥಹಳ್ಳಿಯ ಸುರಬಿ ಹೋಟೆಲ್ನಲ್ಲಿ ನಿನ್ನೆ ರಾತ್ರಿ ಗಲಾಟೆಯೊಂದು ನಡೆದಿದೆ. ಈ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಆಟೋ ಚಾಲಕ ಹರೀಶ್ ಮೇಲೆ ರಾಡ್ನಿಂದ ಬಿಜೆಪಿ ಕಾರ್ಯಕರ್ತರು ಎನ್ನಲಾದವರು ಹಲ್ಲೆ ನಡೆಸಿದ್ದಾರೆ ಸದ್ಯ ಹರೀಶ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ಧಾರೆ.
*Bhadravathi Old Town police station : ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಬೆಳಗ್ಗೆ ಮಾಯ! ಮಾಲೀಕನಿಗೆ ಶಾಕ್*
ಸುರಬಿ ಹೋಟೆಲ್ನಲ್ಲಿ ಊಟ ಮುಗಿಸಿ ಬರುವಾಗ ಅಲ್ಲಿಯೇ ಕುಡಿಯುತ್ತಿದ್ದ ವಿಶು, ಚೇತು, ಕಾರ್ತಿಕ್ ಸೇರಿದಂತೆ ಆರಕ್ಕೂ ಹೆಚ್ಚು ಜನರು ಹರೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನೂ ಘಟನೆಗೆ ಕಾರಣವಾಗಿದ್ದು, ಲೋಟಗಳನ್ನ ಏಕೆ ಎಸೆಯುತ್ತೀರಿ ಅಂತಾ ಪ್ರಶ್ನಿಸಿದ್ದು ಎಂದು ಹೇಳಲಾಗುತ್ತಿದೆ. ಹರೀಶ್ಗೆ ಹಿಂದಿನಿಂದ ಬಂದು ರಾಡ್ನಿಂದ ಹೊಡೆದು ಹಲ್ಲೆ ಮಾಡಿದ ಗುಂಪು ಆನಂತರ ಬೇಕಾಬಿಟ್ಟಿ ಥಳಿಸಿದೆ. ಬಳಿಕ ಅಲ್ಲಿದ್ದವರು ಜಗಳ ಬಿಡಿಸಿ, ಆಸ್ಪತ್ರೆಗೆ ಹರೀಶ್ರನ್ನು ದಾಖಲಿಸಿದ್ದಾರೆ ಎಂದು ಹರೀಶ್ನ ಆಪ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇನ್ನೂ ಹರೀಶ್ನನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೆ ಕಾಂಗ್ರೆಸ್ ಕಾರ್ಯಕರ್ತರು, ಹಲ್ಲೆ ನಡೆಸಿದ್ದರ ಬಗ್ಗೆ ಬಿಜೆಪಿ ಕಾರ್ಯಕರ್ತರನ್ನು ವಿಚಾರಿಸಿದ್ದಾರೆ. ಆದರೆ ಈ ವೇಳೆ ನಿಮಗೂ ಚುಚ್ಚಿ ತೀರ್ಥಹಳ್ಳಿಯಲ್ಲಿ ಆರಾಮಾಗಿ ಓಡಾಡುತ್ತೇವೆ ನೋಡಿ ಎಂದು ಸವಾಲು ಹಾಕಿದ್ದಾರೆ ಅಂತಾ ದೂರಿದ್ಧಾರೆ.
ಗೃಹಸಚಿವರ ಊರಲ್ಲಿ (home minister’s constituency ) ಕಾನೂನು ಭಂಗ!?
ತೀರ್ಥಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಈಗಾಗಲೇ ಸಾಕಷ್ಟು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೆ ನಿನ್ನೆ ರಾತ್ರಿ ನಡೆದ ಘಟನೆ ಇನ್ನಷ್ಟು ಸಂಶಯಕ್ಕೆ ಕಾರಣವಾಗಿದೆ. ಗೃಹಸಚಿವರ ಬೆಂಬಲ ಇದೆ ಎಂದೇ ಈ ರೀತಿ ಹಲ್ಲೆ ನಡೆಸ್ತಿದ್ದಾರೆ ಎಂಬ ಆರೋಪಗಳು ಕಾಂಗ್ರೆಸ್ ಕಾರ್ಯಕರ್ತರದ್ಧಾಗಿದೆ. ಆದಾಗ್ಯು ಗೃಹಸಚಿವರು ಇಂತಹ ಘಟನೆಗಳಿಂದ ಅಂತರ ಕಾಯ್ದುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಬೇಕಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com