#SAVEVISL: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಪ್ರತಿಷ್ಠಿತ ವಿಐಎಸ್‌ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರಬರೆದಿದ್ದಾರೆ. ಪ್ರಧಾನಿಗೆ ಬರೆದಿರುವ ಪತ್ರದ ಪ್ರತಿಯೊಂದಿಗೆ ಟ್ವಿಟ್ ಮಾಡಿರುವ ಅವರು, ಭದ್ರಾವತಿ ಯಲ್ಲಿರುವ ವಿಐಎಸ್ ಎಲ್ ಮುಚ್ಚುವ ಆದೇಶ ವನ್ನು ಹಿಂಪಡೆಯಬೇಕು. ಇದು ಕರ್ನಾಟಕದ ಹೆಮ್ಮೆ 1996 ರಲ್ಲಿ ನಾನು ಪ್ರಧಾನ ಮಂತ್ರಿ ಯಾಗಿದ್ದಾಗ VISL ಅನ್ನು SAIL ನೊಂದಿಗೆ ವಿಲೀನಗೊಳಿಸಿದ್ದೇನೆ. ಸಾರ್ವಜನಿಕ ವಲಯದ ನವರತ್ನಗಳ ಕಲ್ಪನೆಯನ್ನೂ ನಾನು ಪರಿಚಯಿಸಿದ್ದೇನೆ. ಹೊಸ ಆಲೋಚನೆಗಳೊಂದಿಗೆ ಸಾರ್ವಜನಿಕ ವಲಯದ ಘಟಕಗಳನ್ನು ಉಳಿಸಬಹುದು ಎಂದು ಟ್ವಿಟ್ ಮಾಡಿದ್ದಾರೆ.
ಜ.22ರಂದು ದೇವೆಗೌಡರು, ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಸಾವಿರಾರು ಕುಟುಂಬಗಳ ಬದುಕಿಗೆ ಆಧಾರವಾಗಿ ರುವ, ತನ್ನದೇ ಆದ ಇತಿಹಾಸ ಹೊಂದಿರುವ ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಮುಚ್ಚುವ ಬದಲು ಪುನಶ್ಚೇತನಗೊಳಿಸಲು ಉಕ್ಕು ಸಚಿ ಹಾಗೂ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳಿಗೆ ನಿರ್ದೆಶನ ನೀಡಿ ಎಂದು ಒತ್ತಾಯಿಸಿದ್ದಾರೆ.ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸಾರ್ವಜನಿಕ ವಲಯದ ಸಂಸ್ಥೆ ಯಾಗಿದ್ದು, ಅದನ್ನು ದೂರದೃಷ್ಟಿಯುಳ್ಳ ಇಂಜಿನಿಯರ್ ಮತ್ತು ಭಾರತರತ್ನ ಎಂ ವಿಶ್ವೇಶ್ವರಯ್ಯ ಅವರು 1918 ರಲ್ಲಿ ಸ್ಥಾಪಿಸಿದ್ದರು. ನಾನು ಪ್ರಧಾನಿಯಾ ಗಿದ್ದ ಅವಧಿಯಲ್ಲಿ ಇದನ್ನು ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ತಂದು 650 ಕೋಟಿ ವೆಚ್ಚ ದಲ್ಲಿ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಯೋಜಿಸ ಲಾಗಿತ್ತು. ಆದರೆ, ಅದು ಸಾಕಾರಗೊಳ್ಳಲಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ: ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್‌ಸೈಟ್
2016ರಲ್ಲಿ ನೀತಿ ಆಯೋಗವು ಹೂಡಿಕೆ ಹಿಂತೆಗೆತಕ್ಕೆ ಶಿಫಾರಸು ಮಾಡಿದರೂ ಫಲಕಾರಿಯಾಗಲಿಲ್ಲ. ನಂತರ ಖಾಸಗೀಕರಣಕ್ಕೆ ಶಿಫಾರಸು ಮಾಡಿತ್ತಾದರೂ ಯಾವುದೇ ಖಾಸಗಿ ಪ್ರಧಾನಿ ವಿವರಿಸಿದ್ದಾರೆ.ಹೂಡಿಕೆದಾರರು ಕಾರ್ಖಾನೆ ಕೊಳ್ಳಲು ಒಲವು ತೋರಲಿಲ್ಲ. ಹಾಗಾಗಿ ಕಾರ್ಖಾನೆ ಸಂಕಷ್ಟಕ್ಕೆ ಸಿಲುಕಿದೆ. ಸುಮಾರು 20,000 ಕುಟುಂಬಗಳ ಬದುಕು ಕಾರ್ಖಾನೆಯನ್ನೇ ಅವಲಂಬಿಸಿರುವು ದರಿಂದ ಅದನ್ನು ಮುಚ್ಚುವ ನಿರ್ಧಾರ ಸರಿಯಲ್ಲ, ಕಾರ್ಮಿಕರ ಜೀವನ ಅತಂತ್ರವಾಗುವುದರಿಂದ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಅತ್ಯುತ್ತಮ ಗುಣಮಟ್ಟದ ಉಕ್ಕು ತಯಾರಿಸುವ ಸಾಮರ್ಥ್ಯ ವನ್ನು ವಿಐಎಸ್ ಎಲ್ ಹೊಂದಿದ್ದು, ಹಿಂದೆ ಅಣುಶಕ್ತಿ ಕೇಂದ್ರಗಳು, ರೈಲ್ವೆ ಇಲಾಖೆ, ಆಟೋ ಮೊಬೈಲ್ ಕ್ಷೇತ್ರಕ್ಕೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಒದಗಿಸಿದೆ. ಈಗ ಆತ್ಮನಿರ್ಭರ ಭಾರತ ಯೋಜನೆ ಭಾಗವಾಗಿ ರಕ್ಷಣಾ ಕ್ಷೇತ್ರ, ಪರಮಾಣು ವಲಯ, ಆಟೊ ಮೊಬೈಲ್ ಹಾಗೂ ರೈಲ್ವೆ ಉಪಕರ ಣಗಳಿಗೆ ಪೂರಕ ಉತ್ಪನ್ನಗಳನ್ನು ಪೂರೈಕೆ ಮಾಡಲು ಸಹಾಕಾರಿಯಾಗಲಿದೆ. ಹೀಗಾಗಿ ಭದ್ರಾವತಿಯ ಉಕ್ಕಿನ ಕಾರ್ಖಾನೆಯನ್ನು ಮುಚ್ಚುವ ಪ್ರಸ್ತಾವ ಕೈ ಬಿಡಬೇಕು, ಬದಲಿಗೆ ಅದನ್ನು ಪುನಶ್ಚತನಗೊಳಿಸಲು ಮುಂದಾಗಬೇಕು ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮಾಜಿ ಅಭಪ್ರಾಯ ಪಟ್ಟಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
Requested Prime Minister @narendramodi to withdraw the closure order of VISL in Bhadravati. It is the pride of Karnataka. As PM in 1996 I had merged VISL with SAIL. I had also introduced the idea of public sector Navaratnas. Public sector units can be saved with innovative ideas. pic.twitter.com/kaY0j2YAT5
— H D Devegowda (@H_D_Devegowda) January 22, 2023