ಸುದ್ದಿಯ ಸ್ಥಳ: Sagara, Shivamogga, Karnataka · Shikaripura, Shivamogga, Karnataka · Soraba, Shivamogga, Karnataka · Thirthahalli, Shivamogga, Karnataka · Hosanagara, Shivamogga, Karnataka
ಶಿವಮೊಗ್ಗದ ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ಹೊಸವರ್ಷದ ಆಚರಣೆ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ಗುಂಡು ತಗುಲಿದ್ದ ಯುವಕ ಸಾವನ್ನಪ್ಪಿದ್ದಾನೆ. ವಿನಯ್ 34 ವರ್ಷ ಮೃತ ಯುವಕ, ಈತ ಮೂಲತಹಃ ಚಿತ್ರದುರ್ಗದವಾಗಿದ್ದು, ತಂದೆಯು ಸರ್ಕಾರಿ ಕೆಲಸದಲ್ಲಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿದ್ದರು, 35 ವರ್ಷದ ವಿನಯ್ ವಾಲಿಬಾಲ್ ಪ್ಲೇಯರ್ ಆಗಿದ್ದು, ಹಲವು ಪಂದ್ಯಾವಳಿಯಲ್ಲಿ ಆಡಿದ್ದನಂತೆ.
ಆಶಾಭಟ್ ಮಾತು ಪ್ರಪಂಚದಲ್ಲಿಎಲ್ಲಿಗೆ ಹೋದರೂ ಸಹ ಹೆಮ್ಮೆಯಿಂದ ಹೇಳೋದು ಶಿವಮೊಗ್ಗ-ಭದ್ರಾವತಿ : ಆಶಾಭಟ್
ಹೊಸನಗರದಲ್ಲಿ ಈ ಹಿಂದೇ ಓದುತ್ತಿದ್ದ ವಿನಯ್ ಪಿಎಚ್ಡಿ ಓದುತ್ತಿದ್ದ, ದಾವಣಗೆರೆಯ ವಿವಿಯಲ್ಲಿ ಕನ್ನಡದ ವಿಷಯದಲ್ಲಿ ಪಿಎಚ್ಡಿ ಮಾಡುತ್ತಿದ್ದರು. ಶಿವಮೊಗ್ಗದ ಪಿಡಬ್ಲ್ಯುಡಿ ಕ್ವಾಟ್ರಸ್ನ ನಿವಾಸಿಯಾಗಿದ್ದ ವಿನಯ್ ಸಂದೀಪ್ ಸ್ನೇಹಿತರಾಗಿದ್ಧಾರೆ. ಹೊಸವರ್ಷದ ಪಾರ್ಟಿಯಲ್ಲಿ ವಿನಯ್ ಪಾಲ್ಗೊಂಡಿದ್ದ. ಈ ವೇಳೆ ಮಂಜುನಾಥ್ ಹಾರಿಸಿದ್ದ ಗುಂಡು, ಮಿಸ್ ಆಗಿ ವಿನಯ್ಗೆ ಬಂದಿದೆ.
ಇದನ್ನ ಸಹ ಓದಿ :BREAKING NEWS / ಹೊಸ ವರ್ಷದ ಪಾರ್ಟಿ ಸಂದರ್ಭದಲ್ಲಿ ಗನ್ಫೈರ್/ ಓರ್ವ ಗಂಭೀರ/ ಗುಂಡು ಹಾರಿಸಿವನು ಸಹ ಸಾವು/ NEW YEAR ನ ಮೊದಲ ಕ್ರೈಂ
ನಿನ್ನೆ ರಾತ್ರಿಯೇ ಖಾಸಗಿ ಆಸ್ಪತ್ರೆ ವಿನಯ್ರನ್ನ ದಾಖಲಿಸಲಾಗಿತ್ತು, ಇವತ್ತು ಹನ್ನೆರಡು ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರ ಎಂದು ತಿಳಿದುಬಂದಿದೆ.