ತೀರ್ಥಹಳ್ಳಿಯಲ್ಲಿ ಒಂದೇ ದಿನ ಇಬ್ಬರ ದುರ್ಮರಣ/ ಆಕ್ಸಿಡೆಂಟ್​ನಲ್ಲಿ ಇಬ್ಬರಿಗೆ ಗಾಯ/ ನಡೆದ ಘಟನೆಗಳ ವಿವರ ಇಲ್ಲಿದೆ ಓದಿ

Malenadu Today

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಮಳಲಿಮಠದ ಬಳಿ ನಿನ್ನೆ ರಾತ್ರಿ ಅಪಘಾತ ಆಗಿದೆ. ಇಲ್ಲಿನ ಮಳಲಿ ಮಠ ಸಮೀಪ ಬೈಕ್ ಅಪಘಾತವಾಗಿ ಶೆಟ್ಟಿ ಕೊಪ್ಪ ಪ್ರದೀಪ್ ಎಂಬವರು ಮೃತಪಟ್ಟಿದ್ದಾರೆ. 

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಈ ಭಾಗದಲ್ಲಿ ಬರುವ ಕಂಪಲನಗರದ ಸೇತುವೆ ಸಮೀಪ  ಘಟನೆ ನಡೆದಿದ್ದು, ಪ್ರದೀಪ್​ ಕೋಣಂದೂರಿನಿಂದ  ಶೆಟ್ಟಿಕೊಪ್ಪಕ್ಕೆ ಬರುತ್ತಿದ್ದರು. ವೇಳೆ ನಿಯಂತ್ರಣ ತಪ್ಪ ಬೈಕ್ ಅಪ್​ಸೆಟ್ ಆಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಪ್ರದೀಪ್​ನವರು ಸಾವನ್ನಪ್ಪಿದ್ದಾರೆ.

ವಿಶೇಷ ವರದಿ : ಕಂತೆ ಕಂತೆ ದುಡ್ಡು, ತೊಲಗಟ್ಲೆ ಬಂಗಾರ ದಾರೀಲೆ ಸಿಕ್ಕಿತು/ ಅದೃಷ್ಟದ ನಿದಿಗೆ ಆಸೆ ಪಡೆದ ಕಾವೇರಿ ಮಾಡಿದ್ದೇನು ಓದಿ/

ವೃದ್ಧ ಆತ್ಮಹತ್ಯೆ

ಇನ್ನೂ ತೀರ್ಥಹಳ್ಳಿ ತಾಲ್ಲೂಕು ಮೇಳಿಗೆಯ ಬಳಿಯಲ್ಲಿ ಬರುವ ಶಂಕರಗದ್ದೆ ಶಂಕರಣ್ಣ ಎಂಬವರು ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಈ ಸಂಬಂಧ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಕೈಮರದ ಬಳಿ ಅಪಘಾತ

ತೀರ್ಥಹಳ್ಳಿ ತಾಲ್ಲೂಕು ಕೈಮರದ ಬಳಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಆಕ್ಸಿಡೆಂಠ್ ಆಗಿದೆ.  ಚೊಕ್ಕಡಬೈಲು ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ಬೈಕ್​ ಮಣಿಪಾಲ್​ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಬೈಕ್​ನಲ್ಲಿದ್ದ ಇಬ್ಬರು ಗಾಯಗೊಂಡಿದ್ಧಾರೆ. 

ಇದನ್ನು ಓದಿ : ಹಿಂದೂ ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ ಸಾದ್ವಿ ಪ್ರಗ್ಯಾ ಸಿಂಗ್​/ ದತ್ತ ಪೀಠಕ್ಕೂ ಭೇಟಿ!?

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article