ನಿನ್ನೆ ರಾತ್ರಿ ಶಿವಮೊಗ್ಗ ಪೊಲೀಸರು ಇದ್ದಕ್ಕಿದ್ದಂತೆ ರೋಡಿಗಿಳಿದಿದ್ದರು, ಆಯಕಟ್ಟಿನ ಜಾಗದಲ್ಲಿ ಪೊಲೀಸ್ ವ್ಯಾನ್ ನಿಲ್ಲಿಸಿಕೊಂಡು ಕೈ ಅಡ್ಡಹಾಕುತ್ತಿದ್ರು. ಇದಕ್ಕೆ ಕಾರಣವೂ ಇತ್ತು. ರಾತ್ರಿ ಕುಡಿದು, ವಾಹನ ಓಡಿಸ್ತಿದ್ದವರ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್
ಈ ಸಂಬಂಧ ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 20 ಚೆಕ್ಪೋಸ್ಟ್ಗಳನ್ನು( Check Post) ಹಾಕಿ, ಪೊಲೀಸ್ ಇಲಾಖೆಯ ವಿವಿಧ ಮಟ್ಟದ ಅಧಿಕಾರಿಗಳು, ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಿದರು. ಈ ವೇಳೆ ಹಲವರು ಕುಡಿದು ಗಾಡಿ ಓಡಿಸ್ತಿರೋದು ಪತ್ತೆಯಾಗಿದೆ. ಅವರ ವಿರುದ್ಧ ಒಟ್ಟು 46 Drunk and Drive ಕೇಸ್ಗಳನ್ನು ದರ್ಜ್ ಮಾಡಿದ್ದಾರೆ.
ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ …ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ
ಎಲ್ಲೆಲ್ಲಿ ಎಷ್ಟೆಷ್ಟು ಕೇಸ್?
- ಶಿವಮೊಗ್ಗ ವಿಭಾಗ -16,
- ಭದ್ರಾವತಿ ಉಪ ವಿಭಾಗ – 03,
- ಸಾಗರ ಉಪ ವಿಭಾಗ – 06,
- ಶಿಕಾರಿಪುರ ವಿಭಾಗ – 05
- ತೀರ್ಥಹಳ್ಳಿ ಉಪ ವಿಭಾಗ – 16
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
#shivamoggalivenews#malenadutoday #malnad_memories #ಶಿವಮೊಗ್ಗದಲ್ಲಿ ಕುಡಿದು ಗಾಡಿ ಓಡಿಸಿದ್ರೆ, ಕಾದು ಹಿಡಿಯುತ್ತಾರೆ ಪೊಲೀಸರು/ ಇಲ್ಲಿದೆ ಸ್ಯಾಂಪಲ್ ವಿಡಿಯೋ! /ಪೊಲೀಸರ ಕಾರ್ಯಾಚರಣೆ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ಸ್ ಮಾಡಿ pic.twitter.com/J5iL1eSNAb
— malenadutoday.com (@CMalenadutoday) December 17, 2022


