ಆಕ್ಸಿಡೆಂಟ್​ ನಿಂದಾಗಿ ಒಮಿನಿಯಲ್ಲಿ ಸಿಲುಕಿದ್ದ ವ್ಯಕ್ತಿಯ ಜೀವ ಉಳಿಸಿದ 112 ಸಿಬ್ಬಂದಿ

ಆಕ್ಸಿಡೆಂಟ್​ ಆಗಿ, ಜಖಂ ಆದ ವಾಹನದಲ್ಲಿ ಸಿಲುಕಿ ನರಳುತ್ತಿದ್ದ ವ್ಯಕ್ತಿಯನ್ನು 112 ಸಿಬ್ಬಂದಿ ಕಾಪಾಡಿದ್ಧಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ (sagara rural police station) ವ್ಯಾಪ್ತಿಯಲ್ಲಿ ಈ ಘಟನೆ ನಿನ್ನೆ ನಡೆದಿದೆ

ನಿನ್ನೆ ಬೆಳಗ್ಗಿನ ಜಾವ ಸಾಗರ ತಾಲ್ಲೂಕಿನ ಶಿರವಂತೆ ಬಳಿ ಅಪಘಾತವೊಂದು ಸಂಭವಿಸಿತ್ತು. ಹೊಸನಗರ ಕಡೆಯಿಂದ ಕುಮಟಾಕ್ಕೆ ಹೋಗುತ್ತಿದ್ದ ಒಮಿನಿ ವಾಹನವೊಂದು ಅಪ್​ಸೆಟ್ ಆಗಿತ್ತು. 

ತಕ್ಷಣ ಸ್ಥಳೀಯರು 112 ಸಿಬ್ಬಂದಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಚಾರ ಕೇಳಿ ತಕ್ಷಣ ಹೊರಟ ಸಾಗರ ಗ್ರಾಮಾಂತರ ಸ್ಟೇಷನ್​ನ ಹೆಚ್​ಸಿ  ಹುಚ್ಚಪ್ಪ ಎಂ ಬಿ ಮತ್ತು ಚಾಲಕ  ಸಂದೀಪ್  ಸ್ಥಳಕ್ಕೆ ಬಂದಿದ್ದಾರೆ. 

ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ? 

ಆದರೆ ಘಟನೆಯಲ್ಲಿ ವಾಹನ ಜಖಂಗೊಂಡಿದ್ದರಿಂದ ಗಾಯಗೊಂಡಿದ್ದ ಚಾಲಕ ಪ್ರವೀಣ್​ರನ್ನ ಅದರಿಂದ ಹೊರತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತಕ್ಷಣ 112 ಸಿಬ್ಬಂದಿ ಸಾಗರ ಟೌನ್​ಗೆ ವಾಪಸ್​ ಆಗಿ ಮೆಕಾನಿಕ್ ಒಬ್ಬರನ್ನ ಕರೆದುಕೊಂಡು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ಮೆಕಾನಿಕ್​ ರ ಸಹಾಯದೊಂದಿಗೆ ಸುಮಾರು ಮೂರು ಗಂಟೆ ಕಾರ್ಯಾಚರಣೆ ನಡೆಸಿ, ಗಾಯಾಳುವನ್ನು ವಾಹನದಿಂದ ಸುರಕ್ಷಿತವಾಗಿ ಹೊರಕರೆದುಕೊಂಡು ಬಂದ,  ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಇದನ್ನು ಸಹ ಓದಿ  : ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಸದ್ಯ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಾಲಕ ಪ್ರವೀಣ್ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಹಾಯಕ್ಕೆ ದಾವಿಸಿ, ಜೀವ ಉಳಿಸಿದ ಸಾಗರ ಗ್ರಾಮಾಂತರ ಸ್ಟೇಷನ್ ಸಿಬ್ಬಂದಿಗೆ ಶಿವಮೊಗ್ಗ ಎಸ್​ಪಿ ಜಿಕೆ ಮಿಥುನ್​ಕುಮಾರ್ (shivamogga sp) ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

BREAKING NEWS : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ​ ಶೀಘ್ರದಲ್ಲಿಯೇ ಹೊಸ ಅಧ್ಯಕ್ಷ? ಯಾರಾಗ್ತಾರೆ ಡಿಸ್ಟ್ರಿಕ್ಟ್​ ಪ್ರೆಸಿಡೆಂಟ್ ಇಲ್ಲಿದೆ ವರದಿ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Leave a Comment