ಬೈಕ್ ಕಳ್ಳನನ್ನ ಹಿಡಿದ ದೊಡ್ಡಪೇಟೆ ಪೊಲೀಸರು!

ಹಂಚಿಕೊಳ್ಳಿ
WhatsApp Facebook X Telegram
Doddapete Police Crack Bike Theft Case, Seize 3 Bikes Worth ₹1.14 Lakh Malenadu Today
Doddapete Police Crack Bike Theft Case, Seize 3 Bikes Worth ₹1.14 Lakh Malenadu Today

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮನೆಯ ಗೇಟಿನ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಹಿಡಿಯುವಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಆತನಿಂದ 1,14,000 ಮೌಲ್ಯದ ಒಟ್ಟು 3 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಜುಲೈ 30ರಂದು ಈ ಕೇಸ್ ವರದಿಯಾಗಿತ್ತು. ಅಂದು ಸಂಜೆ ಚಂದ್ರಶೇಖರ್ ಹೆಚ್. ಎಂಬುವವರು ತಮ್ಮ ಮನೆಯ ಗೇಟಿನ ಮುಂದೆ ನಿಲ್ಲಿಸಿದ್ದ ಪ್ಯಾಷನ್ ಪ್ಲಸ್ ಬೈಕ್ ಕಳ್ಳತನವಾಗಿತ್ತು. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಶಿವಮೊಗ್ಗ ತಾಲೂಕು ಪಿಳ್ಳಂಗಿರಿಯ ಹೊಸಮನೆ ತಾಂಡ ನಿವಾಸಿ ರಂಗನಾಥ ಆರ್ @ ಹೊಸಮನೆ ತಾಂಡ ರಂಗ (33) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕಳ್ಳತನವಾಗಿದ್ದ ಪ್ಯಾಷನ್ ಪ್ಲಸ್ ಬೈಕ್ ಹಾಗೂ ಇತರೆ ಎರಡು ಸ್ಪ್ಲೆಂಡರ್ ಪ್ರೋ ಬೈಕ್‌ಗಳು ಸೇರಿದಂತೆ ಅಂದಾಜು ₹1,14,000 ಮೌಲ್ಯದ ಒಟ್ಟು 3 ಬೈಕ್‌ಗಳನ್ನು ಪೊಲೀಸರು ಅಮಾನತುಪಡಿಸಿಕೊಂಡಿದ್ದಾರೆ.

ದೊಡ್ಡಪೇಟೆ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ವೈ. ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ, ಪಿಎಸ್‌ಐ ಅಂಬಿಗೇರ್, ಎಎಸ್‌ಐ ನಾಗರಾಜ್ ಸಿ.ಆರ್., ಹೆಚ್‌ಸಿ ಸಂದೀಪ ಎಸ್.ಡಿ., ಸಿಹೆಚ್‌ಸಿ ಬಸವರಾಜ್ ಹೊರಗಿ, ಸಿಪಿಸಿಗಳಾದ ಗುರುನಾಯ್ಕ, ಮನೋಹರ್ ಹಾಗೂ ಪುನೀತ್‌ರಾವ್ ಅವರನ್ನೊಳಗೊಂಡ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor