ಆಯನೂರು ಸಮೀಪ ಹಿಟ್‌ ಅಂಡ್‌ ರನ್‌ ಇನ್ಸಿಡೆಂಟ್​ : ಮೆಸ್ಕಾಂ ಲೈನ್‌ಮ್ಯಾನ್‌ ಸಾವು!

ಹಂಚಿಕೊಳ್ಳಿ
WhatsApp Facebook X Telegram
kumsi police station image malenadutoday
kumsi police station image malenadutoday

ಸುದ್ದಿಯ ಸ್ಥಳ: Sagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಾಲೂಕಿನ ಆಯನೂರು ಸಮೀಪದ ನಯಾರ ಪೆಟ್ರೋಲ್ ಬಂಕ್ ಬಳಿ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೆಸ್ಕಾಂ ಲೈನ್‌ಮ್ಯಾನ್‌ ಓರ್ವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕುಂಸಿ ಮೆಸ್ಕಾಂ ಉಪ ವಿಭಾಗದ ಹಾರ್ನಳ್ಳಿ ಶಾಖೆಯಲ್ಲಿ ಲೈನ್‌ಮ್ಯಾನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ತಿರುಮಲೇಶ್ ರೆಡ್ಡಿ (30) ಎಂದು ಗುರುತಿಸಲಾಗಿದೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯವರಾದ ಇವರು ಹಾರ್ನಳ್ಳಿಯಲ್ಲಿ ನೆಲೆಸಿದ್ದರು.

ಮೈಸವಳ್ಳಿ ಮತ್ತು ವೀರಣ್ಣನಬೆನವಳ್ಳಿ ಸುತ್ತಮುತ್ತ ತಡರಾತ್ರಿ ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ, ಮಾಹಿತಿ ಮೇರೆಗೆ ತಿರುಮಲೇಶ್ ರೆಡ್ಡಿ ಅವರು ಬೈಕ್‌ನಲ್ಲಿ ಸ್ಥಳಕ್ಕೆ ತೆರಳಿದ್ದರು. ಬಳಿಕ ಮನೆಗೆ ಹಿಂದಿರುಗುತ್ತಿದ್ದಾಗ ಬೆಳಗಿ ಜಾವ, ಯಾವುದೋ ವೆಹಿಕಲ್​ ಇವರನ್ನ ಗುದ್ದಿಕೊಂಡು ಹೋಗಿದೆ. ಅಪಘಾತದ ರಭಸಕ್ಕೆ ತಿರುಮಲೇಶ್ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಕೇಸ್​ ಮಾಡಿದ್ದಾರೆ.

ತಿರುಮಲೇಶ್ ರೆಡ್ಡಿ ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ತಡರಾತ್ರಿ ವಿದ್ಯುತ್ ಸಂಬಂಧಿತ ಸಮಸ್ಯೆ ಪರಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುವುದು ತೀವ್ರ ನೋವು ತಂದಿದೆ ಎಂದು ಸಹೋದ್ಯೋಗಿ ಲೈನ್‌ಮ್ಯಾನ್‌ಗಳು ದುಃಖ ವ್ಯಕ್ತಪಡಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor