ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಸರ್ವಜಾತಿ-ಜನಾಂಗಗಳ ವಿಧುರ-ವಿಧವೆ ಮತ್ತು ಪ್ರಥಮ ವಿವಾಹ ಸಮಾಲೋಚನೆ ವೇದಿಕೆ ಹಾಗೂ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದ ಆಶ್ರಯದಲ್ಲಿ ರಾಜ್ಯಮಟ್ಟದ 34ನೇ ಮಾಸಿಕ ವಿಧುರ-ವಿಧವೆ ಪುನರ್ವಿವಾಹ ಮತ್ತು ಪ್ರಥಮ ವಿವಾಹ ಅಭಿಲಾಷಿಗಳ ಸಮಾಲೋಚನಾ ಸಮಾವೇಶವನ್ನು ನವೆಂಬರ್ 29ರಂದು ಆಯೋಜಿಸಲಾಗಿದೆ.
ವಿಧುರ-ವಿಧವೆ ಪುನರ್ವಿವಾಹಕ್ಕೆ ಸಮಾಲೋಚನೆ ವೇದಿಕೆ
ನಗರದ ಡಿ.ಸಿ. ಕಚೇರಿ ಆವರಣದಲ್ಲಿರುವ ಆರ್ಟಿಒ ಕಚೇರಿ ರಸ್ತೆಯ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ, ಪ್ರೆಸ್ಕ್ಲಬ್ ಎದುರು ಅಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಮಾವೇಶ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಮಲಾ ನೆಹರೂ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಕರ್ನಾಟಕ ಸಂಘದ ಮಾಜಿ ಗೌರವ ಕಾರ್ಯದರ್ಶಿ ಪ್ರೊ. ಆಶಾಲತಾ ಎಂ. ಮತ್ತು ರಿಪ್ಪನ್ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಬಿ.ಎಲ್. ರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಮಹಿಳಾ ವಕೀಲರ ಸಂಘದ ಅಧ್ಯಕ್ಷೆ ಹಾಗೂ ಎ.ಪಿ.ಸಿ.ಆರ್. ಅಧ್ಯಕ್ಷೆ, ನ್ಯಾಯವಾದಿ ಸರೋಜ ಚಂಗೊಳ್ಳಿ ಉಪಸ್ಥಿತರಿರುವರು. ಡಿ.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ರಾಚಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಧುರ-ವಿಧವೆಯರ ಪುನರ್ವಿವಾಹಕ್ಕೆ ಹಾಗೂ ಪ್ರಥಮ ವಿವಾಹಕ್ಕೆ ಆಸಕ್ತಿ ಹೊಂದಿರುವ ಅವಿವಾಹಿತರು ಮತ್ತು ಪುನರ್ವಿವಾಹಾಕಾಂಕ್ಷಿಗಳಿಗೆ ಪರಸ್ಪರ ಪರಿಚಯ ಮಾಡಿಕೊಳ್ಳಲು, ಸಮಾಲೋಚನೆ ನಡೆಸಲು ಹಾಗೂ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ವೇದಿಕೆ ಕಲ್ಪಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ.
ಆಸಕ್ತರು ಸಮಾವೇಶದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9448143165, 9448127813 ಹಾಗೂ 9481914346 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಪತ್ರಿಕಾಭವನದ ಮೂಲಕ ಮಾಹಿತಿ ನೀಡಿದ್ದಾರೆ.
