ತೀರ್ಥಹಳ್ಳಿಯಲ್ಲಿ ವಿಂಡೋ ಗ್ಲಾಸ್ ಒಡೆದಿದ್ದ ಕಾರಿನ ಮೇಲೆ ಇನ್​ಸ್ಪೆಕ್ಟರ್​ಗೆ ಬಂತು ಡೌಟ್​! ಮೊಬೈಲ್​ ಕಳ್ತನದ ಸ್ಕ್ಯಾಮ್​ ಬಟಾಬಯಲು! ಕೇರಳದ ಆರೋಪಿ ಸೇರಿ 16 ಲಕ್ಷದ ಫೋನ್ ಸೀಜ್

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

ಸುದ್ದಿಯ ಸ್ಥಳ: Thirthahalli, Shivamogga, Karnataka

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಸಾಮಾನ್ಯವಾಗಿ ಬಹುತೇಕ ಸಮಯದಲ್ಲಿ ಪೊಲೀಸರ ಅನುಮಾನವೇ ಕಳ್ಳನನ್ನ ಹಿಡಿದುಕೊಡುತ್ತದೆ ಎಂಬುದಕ್ಕೆ ತೀರ್ಥಹಳ್ಳಿ ಟೌನ್ ಸ್ಟೇಷನ್​ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.

ಇಲ್ಲಿನ ಬಾಳೇಬೈಲು ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಬಿಳಿ ಬಣ್ಣದ ಹ್ಯುಂಡಾ ವೆನ್ಯೂ ಕಾರನ್ನು ತಪಾಸಣೆ ನಡೆಸಿದ ಪೊಲೀಸರು, ಕಾರಿನ ಸೀಟಿನ ಕೆಳಗೆ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ವಿವಿಧ ಕಂಪನಿಗಳ ಸುಮಾರು 150ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಳ್ಳಲಾದ ಮೊಬೈಲ್‌ಗಳ ಅಂದಾಜು ಮೌಲ್ಯ ಸುಮಾರು 16,50,000 ರೂಪಾಯಿಗಳೆಂದು ಅಂದಾಜಿಸಲಾಗಿದೆ.

ತೀರ್ಥಹಳ್ಳಿಯಲ್ಲಿ ಘಟನೆ ಬಯಲಾಗಿದ್ದು ಹೇಗೆ?

ತೀರ್ಥಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಇಮಾನ್ ಬೇಗ್​, ನವೆಂಬರ್ 24, 2026ರಂದು ರೌಂಡ್ಸ್​ನಲ್ಲಿದ್ದರು. ಈ ವೇಳೆ ತೀರ್ಥರಾಮೇಶ್ವರ ಕೆಫೆ ಮುಂಭಾಗ ರಸ್ತೆ ಬದಿಯಲ್ಲಿ ನಿಂತಿದ್ದ ಬಿಳಿಯ ಬಣ್ಣದ ಹ್ಯುಂಡಾ ವೆನ್ಯೂ ಕಾರನ್ನ ಗಮನಿಸಿದ್ದಾರೆ. ಅವರಿಗೆ ತಕ್ಷಣ ಡೌಟ್ ಒಂದು ಬಂದಿದೆ. ಕಾರಿನ ಡ್ರೈವರ್ ಪಕ್ಕದ ಎಡ ಗ್ಲಾಸ್ ಒಡೆದಿರುವುದು ಅವರಿಗೆ ಅನುಮಾನಸ್ಪದವಾಗಿ ಕಾಣಿಸಿದೆ. ಹಾಗಾಗಿ ಚಾಲಕನನ್ನು ವಿಚಾರಿಸಿದ್ದಾರೆ, ಆತ ತನ್ನ ನ್ನ ಮೊಹ್ಮದ್ ಷರೀಪ್ ಬಿನ್ ಅಜೀಜ್ (35) ಎಂದು ಪರಚಯಿಸಿಕೊಂಡು, ತಾನೊಬ್ಬ ಕಾರ್ ಡೀಲರ್, ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರಂಗಡಿ ತಾಲೂಕಿನ ಚಲರಿ ಗ್ರಾಮದವನು ಎಂದಿದ್ದಾನೆ.

ಆದರೆ ಇನ್​ಸ್ಪೆಕ್ಟರ್​​ಗೆ ಅನುಮಾನ ಕ್ಲಿಯರ್ ಆಗಲಿಲ್ಲ. ಹಾಗಾಗಿ ಕಾರನ್ನು ಚಾಲಕನ ಸಮೇತ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಕರೆತಂದು ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನ ಸೀಟಿನ ಕೆಳಗಿನ ಬ್ಯಾಗ್‌ನಲ್ಲಿ 150ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಯಾರದ್ದು ಇವೆಲ್ಲಾ ಎಂದು ಕೇಳಿದಾಗ ಚಾಲಕನ ಬಳಿ ಉತ್ತರವಿರಲಿಲ್ಲ. ನಂತರ ತನಿಖೆ ಜೋರು ಮಾಡಿದಾಗ, ವಿಚಾರ ಗೊತ್ತಾಗಿದೆ.

ಭದ್ರಾವತಿಯ ಅಜಯ್ @ ವಿಜಯಕುಮಾರ ಮತ್ತು ಸೀನ @ ಶ್ರೀನಿವಾಸ ಎಂಬುವರಿಂದ ಈ ಮೊಬೈಲ್‌ಗಳನ್ನು ಪಡೆದು ಕಾರಿನ ಚಾಲಕ ಅವುಗಳನ್ನ ತನ್ನೂರಲ್ಲಿ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದನಂತೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸರು ಕಳವು ಮಾಡಿದ ಸ್ವತ್ತುಗಳೆಂದು ತೀರ್ಮಾನಿಸಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 303(2), 317(2) ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಕಲಂ 35(1)(e) ಅಡಿಯಲ್ಲಿ ಕೇಸ್ ಮಾಡಿ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor