ಶಿವಮೊಗ್ಗ : ಬಿಜೆಪಿಯಿಂದ ಸೇವಾದೂತ್ ಅಭಿಯಾನ್, ನಿಮ್ಮೂರಿಗೂ ಬರ್ತಾರೆ, 25 ದಿನ ಇರ್ತಾರೆ, ಏನಿದು ಕಾರ್ಯಕ್ರಮ ?

ಹಂಚಿಕೊಳ್ಳಿ
WhatsApp Facebook X Telegram
BJP Launches 25-Day Sevadoot Abhiyan in Karnataka
BJP Launches 25-Day Sevadoot Abhiyan in Karnataka

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ 25 ವರ್ಷಗಳು ಪೂರೈಸಿರುವ ನೆನಪಿಗಾಗಿ, ದೇಶದಾದ್ಯಂತ 25 ದಿನಗಳ ಕಾಲ ಸೇವಾದೂತ್ ಅಭಿಯಾನ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ಬಳಿಕ ದೇಶದ ಪ್ರಧಾನಿಯಾಗಿ 2001ರಿಂದ ಇಲ್ಲಿಯವರೆಗೆ 25 ವರ್ಷಗಳ ಕಾಲ ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ. ಇದರ ಪ್ರಯುಕ್ತ ದೇಶದಾದ್ಯಂತ ಬಿಜೆಪಿ ವತಿಯಿಂದ ಸೇವಾದೂತ್ ಅಭಿಯಾನವನ್ನು ನಡೆಸಲಾಗುವುದು ಎಂದು ತಿಳಿಸಿದರು.

ಡಿಸೆಂಬರ್ 1 ರಿಂದ 25ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ವಿಸ್ತಾರಕ್ ಆಗಿ ಆಯ್ಕೆ ಮಾಡಲಾಗುತ್ತದೆ. ಈ ವಿಸ್ತಾರಕರು 25 ದಿನಗಳ ಕಾಲ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಈ ಅವಧಿಯಲ್ಲಿ ಸೇವಾ ಕಾರ್ಯಗಳು ಹಾಗೂ ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

ಅಲ್ಲದೆ, ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಕೆಲಸಗಳನ್ನು ಜನರ ಮುಂದೆ ಇಡಲಿದ್ದಾರೆ. ಪಕ್ಷದ ಸಂಘಟನಾತ್ಮಕ ಬಲವರ್ಧನೆಗಾಗಿಯೂ ವಿಸ್ತಾರಕರು ಮತ್ತು ಸೇವಾದೂತರು ಕೆಲಸ ಮಾಡಲಿದ್ದಾರೆ ಎಂದು ಬಿವೈ ವಿಜಯೇಂದ್ರ ವಿವರಿಸಿದ್ದಾರೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor