ಶಿವಮೊಗ್ಗ : ತಮಿಳ್ ಸಿಂಗಿಂಗ್ ಶೋನಲ್ಲಿ ನಾಳೆಯಿಂದ ಮೋಡಿ ಮಾಡಲಿದ್ದಾರೆ ಶಿವಮೊಗ್ಗದ ಪ್ರತಿಭೆ, ಗಣ್ಯರಿಂದ ಹಾರೈಕೆ

ಹಂಚಿಕೊಳ್ಳಿ
WhatsApp Facebook X Telegram
Shivamogga’s Abhijith Rao Enters Star Vijay Super Singer
Shivamogga’s Abhijith Rao Enters Star Vijay Super Singer

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಪ್ರತಿಭೆಗೆ ವಯಸ್ಸಿನ ಅಂತರವಿಲ್ಲ, ಗಡಿಗಳ ಮಿತಿಯಿಲ್ಲ. ಹಳ್ಳಿಯಲ್ಲಿ ಹುಟ್ಟುವ ಪ್ರತಿಭೆಯೊಂದು ಆಲದ ಮರವಾಗಿ ಬೆಳೆದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವುದು ಅದ್ಭುತವೇ ಸರಿ. ಅಂತಹ ಸಾಕಷ್ಟು ಅದ್ಭುತಗಳನ್ನು ನಮ್ಮ ಶಿವಮೊಗ್ಗ ಜಿಲ್ಲೆ ಈಗಾಗಲೇ ನೀಡಿದೆ. ಇದೀಗ ಆ ಸಾಲಿಗೆ ಇನ್ನೊಬ್ಬ ಶಿವಮೊಗ್ಗದ ವ್ಯಕ್ತಿ ಸೇರ್ಪಡೆಗೊಳ್ಳುತ್ತಿದ್ದು, ತಮಿಳಿನ ಜನಪ್ರಿಯ ಸಿಂಗಿಂಗ್ ಶೋನಲ್ಲಿ ಶಿವಮೊಗ್ಗ ಮೂಲದ ಅಭಿಜಿತ್ ರಾವ್ ಸಾಧನೆ ಮಾಡೋಕೆ ಹೊರಟಿದ್ದಾರೆ.

ಹೌದು, ಪ್ರತಿಭಾನ್ವಿತ ಹಿನ್ನೆಲೆ ಗಾಯಕ ಮತ್ತು ಧ್ವನಿ ತಂತ್ರಜ್ಞ ಅಭಿಜಿತ್ ರಾವ್ ಅವರು ನಾಳೆಯಿಂದ ಪ್ರತಿದಿನ ಸಂಜೆ 6:30ಕ್ಕೆ ತಮಿಳಿನ Star Vijay TV ಯಲ್ಲಿ ಪ್ರಸಾರವಾಗಲಿರುವ ಜನಪ್ರಿಯ Super Singer ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಮೊದಲಿನಿಂದಲೂ ಸಹ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಅಭಿಜಿತ್ ಈಗಾಗಲೇ ಎ.ಆರ್. ರೆಹಮಾನ್ ಅವರ ಕೆ.ಎಂ. ಮ್ಯೂಸಿಕ್ ಕನ್ಸರ್ವೇಟರಿಯಲ್ಲಿ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕಂಗುವಾ , ಲವ್ ಸ್ಟೋರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಾಗೂ ಸೋನಿಕ್ ರೂಟ್ಸ್ ತಂಡದ ಮೂಲಕ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.

ಈಗಾಗಲೇ ಸ್ಟಾರ್ ವಿಜಯ್ ಟಿವಿ ಅಭಿಜಿತ್ ರಾವ್ ಅವರ 49 ಸೆಕೆಂಡ್‌ಗಳ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದು, ಅವರ ಧ್ವನಿ, ಸಾಂಗ್ ಹಾಡುವ ಸ್ಟೈಲ್ ಹಾಗೆಯೇ ಅವರ ಹಾಡಿಗೆ ಜಡ್ಜಸ್ ಕೊಡುವ ಕಾಮೆಂಟರಿ ಉತ್ತಮವಾಗಿ ಮೂಡಿ ಬಂದಿದೆ. ಅಷ್ಟೇ ಅಲ್ಲದೆ, ಅಭಿಜಿತ್ ಆಯ್ಕೆ ಮಾಡಿಕೊಂಡು ಹಾಡಿರುವ ಸಾಂಗ್ ಹಾಗೆಯೇ ಆ ಪ್ರೋಮೋ ಕಟ್, ಕಾರ್ಯಕ್ರಮ ಯಾವಾಗ ಆರಂಭವಾಗುತ್ತದೆಯೋ, ಈತನ ಹಾಡನ್ನು ಯಾವಾಗ ಕೇಳುತ್ತೇವೆಯೋ ಎಂದು ಅಭಿಮಾನಿಗಳು ಕಾಯುವಂತೆ ಮಾಡಿದೆ ಎಂಬುದಕ್ಕೆ ಅಲ್ಲಿ ಬಂದಿರುವ ಕಾಮೆಂಟ್‌ಗಳೇ ಸಾಕ್ಷಿ.

ಶಿವಮೊಗ್ಗದ ಮಗನನ್ನು ಹರಸಿ ಬೆಂಬಲಿಸಿ : ಬಿ.ವೈ. ರಾಘವೇಂದ್ರ ಶುಭ ಹಾರೈಕೆ

ಇನ್ನೂ ಯುವಕನ ಸಾಂಗ್ ಪ್ರೋಮೋ ಒಂದನ್ನು ಹಂಚಿಕೊಂಡು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಶುಭ ಹಾರೈಸಿದ್ದಾರೆ. Star Vijay TV ಯಲ್ಲಿ ಪ್ರಸಾರವಾಗಲಿರುವ ಜನಪ್ರಿಯ Super Singer ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ! ಹಿನ್ನೆಲೆ ಗಾಯಕರಾಗಿ ಹಾಗೂ ಸೋನಿಕ್ ರೂಟ್ಸ್ ತಂಡದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಮಲೆನಾಡಿನ ಈ ಪ್ರತಿಭೆಗೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಆಶೀರ್ವಾದವಿರಲಿ. ನಾಳೆಯಿಂದ ಸಂಜೆ 6:30ಕ್ಕೆ Star Vijay TV ಯಲ್ಲಿ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸಿ, ನಮ್ಮ ಶಿವಮೊಗ್ಗದ ಮಗನನ್ನು ಹರಸಿ, ಬೆಂಬಲಿಸಿ. ಎಂದು ಶುಭ ಹಾರೈಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor