ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಾಜಿ ಶಾಸಕ ಹಾಲಪ್ಪ ಅವರು ಬಂಗಾರಪ್ಪನವರ ಫೋಟೋವನ್ನು ಮನೆಯಿಂದ ಹೊರಹಾಕಿದ್ದು, ಬಂಗಾರಪ್ಪನವರ ಅಭಿಮಾನಿಗಳು ಹಾಲಪ್ಪರಿಗೆ ಯಾವ ರೀತಿ ಉತ್ತರ ಕೊಡುತ್ತೀರೋ ಕೊಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾಜಿ ಶಾಸಕ ಹಾಲಪ್ಪರಿಗೆ ಹಾಕಿಕೊಳ್ಳಲು ಚಡ್ಡಿ ಇರಲಿಲ್ಲ. ಆಗ ಅವರಿಗೆ ಚಡ್ಡಿ ಕೊಡಿಸಿದ್ದು ಇದೇ ಮಧು ಬಂಗಾರಪ್ಪ. ನೆಲ ಒರೆಸಲು ಬಂದವರನ್ನು ಶಾಸಕರನ್ನಾಗಿ ಮಾಡಲಾಯಿತು. ಆದರೆ ಇದೀಗ ಮನೆಯಲ್ಲಿದ್ದ ಬಂಗಾರಪ್ಪನವರ ಫೋಟೋವನ್ನು ಹೊರಹಾಕಿದ್ದಾರೆ ಎಂದರು.
ನಾನೀಗ ಬಂಗಾರಪ್ಪನವರ ಅಭಿಮಾನಿಗಳಿಗೆ ಕರೆ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹಾಲಪ್ಪರಿಗೆ ಯಾವ ರೀತಿ ಉತ್ತರ ಕೊಡುತ್ತೀರೋ ನೀವೇ ಕೊಡಿ ಎಂಬ ಹೇಳಿಕೆಯನ್ನು ನೀಡಿದರು.
