ಶಿವಮೊಗ್ಗಕ್ಕೂ ಕಾಲಿಟ್ಟ ಯುವ ಕಾಂಗ್ರೆಸ್ ಪೋಸ್ಟರ್ ವಾರ್‌! ವಿಜಯೇಂದ್ರ ನಿವಾಸ, ಬಿಜೆಪಿ ಕಚೇರಿಗೆ ಪೋಸ್ಟರ್

ಹಂಚಿಕೊಳ್ಳಿ
WhatsApp Facebook X Telegram
Shivamogga Poster War Youth Congress Puts Up Posters at BY Vijayendra's House and BJP Office
Shivamogga Poster War Youth Congress Puts Up Posters at BY Vijayendra's House and BJP Office
dasrara add shivamogga

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪೋಸ್ಟರ್ ವಾರ್ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿದೆ. ಛಲವಾದಿ ನಾರಾಯಸ್ವಾಮಿ ಮನೆಗೆ ಚಾಕು, ಚೂರಿಗಳನ್ನ ಕೊರಿಯರ್ ಮಾಡಿದ ಪ್ರಕರಣದ ಬೆನ್ನಲ್ಲೆ ಇವತ್ತು ಬೆಳಗಿನ ಜಾವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಶಿವಮೊಗ್ಗ ನಿವಾಸ ಹಾಗೂ ಶಿವಮೊಗ್ಗ ಬಿಜೆಪಿ ಕಚೇರಿ ಗೋಡೆ ಹಾಗೂ ಶಟರ್​ಗಳಿಗೆ ಯುವ ಕಾಂಗ್ರೆಸ್​ ಕಾರ್ಯಕರ್ತರು ಪೋಸ್ಟರ್​ಗಳನ್ನ ಅಂಟಿಸಿದ್ದಾರೆ.

shivamogga dasara add
dasrara add shivamogga
dasrara add shivamogga

ವಿಜಯೇಂದ್ರರವರ ಹೇಳಿಕೆಯನ್ನ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ ನಗರದ ವಿವಿಧೆಡೆ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು ಕಳ್ಳನ್ ಮಕ್ಕಳು ಎಂಬ ಬರಹವಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಜಿಲ್ಲಾ ಬಿಜೆಪಿ ಕಚೇರಿ ಹಾಗೂ ವಿಜಯೇಂದ್ರ ಅವರ ನಿವಾಸ ಸೇರಿದಂತೆ ಮನೆಯ ಕಾಂಪೌಂಡ್ ಮೇಲೂ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಶಿವಮೊಗ್ಗ ನಗರದ ದೀನದಯಾಳ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ಹಾಗೂ ಬೈಪಾಸ್ ರಸ್ತೆಯ ಸಮೀಪವಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೈತ್ರಾದೇವಿ ನಿವಾಸದ ಬಳಿ ಈ ಪೋಸ್ಟರ್​ಗಳನ್ನ ಅಂಟಿಸಲಾಗಿದ್ದು, ಇದು ವಿವಾದವೆಬ್ಬಿಸುವ ಸಾಧ್ಯತೆ ಇದೆ.

shivamogga dasara add
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor