ಭದ್ರಾವತಿಯಲ್ಲಿ ಐಸಿಸ್ ಸಂಪರ್ಕದ ಶಂಕೆ ಪ್ರಕರಣ ಎನ್‌ಐಎಗೆ ವರ್ಗಾವಣೆ ! ಏನಿದು ಕೇಸ್!

ಹಂಚಿಕೊಳ್ಳಿ
WhatsApp Facebook X Telegram
NIA Takes Over Bhadravathi IS Links Case Involving Mohammed Ghouse
NIA Takes Over Bhadravathi IS Links Case Involving Mohammed Ghouse

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಭದ್ರಾವತಿಯಲ್ಲಿ ಆಗಸ್ಟ್​ನಲ್ಲಿ ಅರೆಸ್ಟ್ ಆಗಿದ್ದ ಯುವಕನ ವಿರುದ್ಧದ ಪ್ರಕರಣವನ್ನ ಎನ್​ಐಎ ಟೇಕ್​ ಓವರ್ ಮಾಡಿಕೊಂಡಿದೆ. ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಿದ್ದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದೆ. ಆಗಸ್ಟ್‌ನಲ್ಲಿ ಬಂಧನಕ್ಕೊಳಗಾಗಿದ್ದ 21 ವರ್ಷದ ಯುವಕನ ವಿರುದ್ಧ ಕರ್ನಾಟಕ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿದ ಬೆನ್ನಲ್ಲೇ ತನಿಖೆ ಎನ್‌ಐಎಗೆ ವರ್ಗಾವಣೆಯಾಗಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

ಪ್ರಕರಣ ಎನ್‌ಐಎಗೆ ವರ್ಗಾವಣೆ

ಅದರ ವರದಿಯ ಪ್ರಕಾರ, ಭದ್ರಾವತಿಯಲ್ಲಿ ಎಲೆಕ್ಟ್ರಾನಿಕ್ಸ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಪಾದಿತನನ್ನು ರಾಜ್ಯ ಪೊಲೀಸರು ಆಗಸ್ಟ್‌ನಲ್ಲಿ ಬಂಧಿಸಿದ್ದರು. ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ಹಾಗೂ ಸ್ಫೋಟಕ ಸಾಧನಗಳ ತಯಾರಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಆತನ ವಿರುದ್ಧ ತನಿಖೆ ಆರಂಭಿಸಲಾಗಿತ್ತು. ನಂತರ ಆತನ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದ್ದು, ಆರೋಪಿಯ ಸಂಪರ್ಕಗಳು ಹಾಗೂ ಶಂಕಿತ ಚಟುವಟಿಕೆಗಳ ಕುರಿತು ತನಿಖೆ ನಡೆಸಲಿದೆ.

ಉತ್ತರ ಪ್ರದೇಶದಲ್ಲಿ 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿ ಹ್ಯಾರಿಸ್ ಅಲಿಯನ್ನು ಬಂಧಿಸಿದ ಬಳಿಕ ಐಸಿಸ್ ಸಂಘಟನೆಯ ಶಂಕಿತ ಜಾಲವೊಂದು ಪತ್ತೆಯಾಗಿತ್ತು. ಆ ಜಾಲದೊಂದಿಗೆ ಭದ್ರಾವತಿಯಲ್ಲಿ ಬಂಧಿತನಾಗಿರುವ ಆರೋಪಿ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಆರೋಪಿಯ ಮೊಬೈಲ್ ಫೋನ್‌ಗೆ ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ತಯಾರಿಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ಬಂದಿದ್ದವಷ್ಟೆ ಅಲ್ಲದೆ ಇದಕ್ಕೆ ಪೂರಕವಾಗಿ ಐಇಡಿ ತಯಾರಿಕೆಗೆ ಸಂಬಂಧಿಸಿದ ಕೆಲವು ಸಾಮಗ್ರಿಗಳನ್ನು ಆತ ಸಂಗ್ರಹಿಸಿದ್ದ ಎಂಬ ಆರೋಪವೂ ಇದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor