
ಸುದ್ದಿಯ ಸ್ಥಳ: Bhadravati, Shivamogga, Karnataka
ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿಯಿಂದ ಗೊಂದಿಯ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್ ನವರೆಗೂ ವಿದ್ಯುತ್ ಮಾರ್ಗದ ಸಮೀಪದಲ್ಲಿ ಯಾವುದೇ ಅನಗತ್ಯ ಕೆಲಸ ನಿರ್ವಹಿಸಿದಂತೆ ಮೆಸ್ಕಾಂ ಎಚ್ಚರಿಕೆ ನೀಡಿದೆ.



ಈ ಮಾರ್ಗದಲ್ಲಿರುವ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ 12 ಕಿ.ಮೀ. ಉದ್ದದ 33 ಕೆ.ವಿ. ವಿದ್ಯುತ್ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದ್ದು, ಮಾರ್ಗ ಹಾದುಹೋಗುವ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮೆಸ್ಕಾಂ ಸೂಚಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಹಾಗೂ ಮೆಸ್ಕಾಂ ವತಿಯಿಂದ ಭದ್ರಾವತಿಯ 110/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಗೊಂದಿಯ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್‌ಗೆ ಸಂಪರ್ಕ ಕಲ್ಪಿಸುವ ಸಿಂಗಲ್ ಸರ್ಕ್ಯೂಟ್ ವಿದ್ಯುತ್ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ ಎಂದು ಈ ಕುರಿತಾಗಿ ಮೆಸ್ಕಾಂ ಶಿವಮೊಗ್ಗ ವಿಭಾಗ ವಾರ್ತಾ ಇಲಾಖೆ ಮೂಲಕ ಪ್ರಕಟಣೆಯನ್ನ ನೀಡಿದೆ.

ಮೆಸ್ಕಾಂ ಎಚ್ಚರಿಕೆ ಪ್ರಮುಖ ಅಂಶಗಳು
- ಪ್ರಕಟಣೆಯ ವಿವರನ್ನ ಗಮನಿಸುವುದಾದರೆ, 33 ಕೆ.ವಿ. ವಿದ್ಯುತ್ ಮಾರ್ಗ ಗೊಂದಿ, ಅರಳಿಕೊಪ್ಪ, ತಿಮ್ಲಾಪುರ ಹಾಗೂ ಹಿರಿಯೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮೂಲಕ ಹಾದುಹೋಗಿದೆ. ಈ ಪ್ರದೇಶಗಳ ನಿವಾಸಿಗಳು ವಿದ್ಯುತ್ ಮಾರ್ಗದ ಸಮೀಪ ಎಚ್ಚರಿಕೆಯಿಂದ ಇರಬೇಕು ಎಂದು ವಾರ್ನ್ ಮಾಡಲಾಗಿದೆ.
- ವಿದ್ಯುತ್ ಮಾರ್ಗದ ಗೋಪುರಗಳನ್ನು ಯಾರೂ ಹತ್ತಬಾರದು. ವಿದ್ಯುತ್ ಪ್ರವಹಿಸುವ ತಂತಿಗಳತ್ತ ಲೋಹದ ತಂತಿ, ಹಸಿರು ಬಳ್ಳಿ, ಮರದ ಕೊಂಬೆ ಸೇರಿದಂತೆ ಯಾವುದೇ ವಸ್ತುಗಳನ್ನು ಎಸೆಯಬಾರದು.
- ಈ ಸೂಚನೆಗಳನ್ನು ಉಲ್ಲಂಘಿಸಿ ಯಾರಾದರೂ ವಿದ್ಯುತ್ ಮಾರ್ಗದ ಸಮೀಪ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವಘಡ ಸಂಭವಿಸಿದರೆ, ಅದಕ್ಕೆ ಕೆಪಿಟಿಸಿಎಲ್ ಅಥವಾ ಮೆಸ್ಕಾಂ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗುವುದಿಲ್ಲ ಎಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

