ಚಕ್ಕೋಡಬೈಲು ಶಾಲೆಗೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ! ಮಕ್ಕಳೊಂದಿಗೆ ಬೆರೆತ ಕೇಂದ್ರ ಸಚಿವೆ

ಹಂಚಿಕೊಳ್ಳಿ
WhatsApp Facebook X Telegram
Shobha Karandlaje in Shivamogga Inaugurates Pratibha Karanji, Visits Musician Arun Kumar
Shobha Karandlaje in Shivamogga Inaugurates Pratibha Karanji, Visits Musician Arun Kumar
dasrara add shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬಿಜೆಪಿ ಪ್ರತಿಭಟನೆ ಸಂಬಂಧ ಜಿಲ್ಲಾ ಪ್ರವಾಸದಲ್ಲಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಎರಡು ಭೇಟಿ ಕುತೂಹಲ ಮೂಡಿಸುತ್ತಿದೆ. ಈ ಭೇಟಿಯಲ್ಲಿ ಶಾಲಾ ಮಕ್ಕಳ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿದರೆ, ಮತ್ತೊಂದೆಡೆ ಖ್ಯಾತ ಸಂಗೀತಗಾರರೊಬ್ಬರ ಮನೆಗೆ ದಿಢೀರ್ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.

ಜಿಲ್ಲೆಯ ಚಕ್ಕೋಡಬೈಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮೇಗರವಳ್ಳಿ ಕ್ಲಸ್ಟರ್ ಮಟ್ಟದ 2026-27ನೇ ಸಾಲಿನ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ತಮ್ಮ ಕೌಶಲ್ಯಗಳನ್ನು ಅತ್ಯಂತ ಉತ್ಸಾಹದಿಂದ ಪ್ರಸ್ತುತಪಡಿಸಿದರು. ಈ ವೇಳೆ ಮಕ್ಕಳು ಹಾಗೂ ಶಿಕ್ಷಕಿಯರ ಜೊತೆಗೆ ಕಾಲಕಳೆದ ಕೇಂದ್ರ ಸಚಿವೆ ತಮ್ಮೆಲ್ಲಾ ಕೆಲಸಗಳನ್ನ ಬದಿಗಿಟ್ಟು, ಖುಷಿಪಟ್ಟರು. ಇನ್ನೂ ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಚ್.ವೈ., ಕಾರ್ಯದರ್ಶಿ ಆನಂದ್, ನಿಕಟಪೂರ್ವ ನಿರ್ದೇಶಕರಾದ ಜಯಂತಿ ಎನ್.ಕೆ. ಸೇರಿದಂತೆ ಊರಿನ ಪ್ರಮುಖರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

shivamogga dasara add
dasrara add shivamogga
dasrara add shivamogga

ಇದಾದ ಬಳಿಕ ಶಾಲಾ ಕಾರ್ಯಕ್ರಮದ ಜೊತೆಗೆ, ಶಿವಮೊಗ್ಗ ನಗರದಲ್ಲಿರುವ ಖ್ಯಾತ ಸಂಗೀತಗಾರರು ಹಾಗೂ ಸಂಸ್ಕಾರ ಭಾರತಿಯ ಪ್ರಮುಖರೂ ಆಗಿರುವ ವಿದ್ವಾನ್ ಅರುಣ್ ಕುಮಾರ್ ಅವರ ನಿವಾಸಕ್ಕೂ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿದರು. ಕಲಾವಿದರ ಮನೆಯಲ್ಲಿ ಅವರ ಕುಟುಂಬಸ್ಥರೊಂದಿಗೆ ಕೆಲಕಾಲ ಕಳೆದ ಸಚಿವರು, ಅತ್ಯಂತ ಆತ್ಮೀಯವಾಗಿ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿದರು.

shivamogga dasara add
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor