ಶಿವಮೊಗ್ಗ : ಇವತ್ತು ಎರಡು ತಾಲ್ಲೂಕುಗಳ ಹಲವು ಏರಿಯಾಗಳಲ್ಲಿ ಕರೆಂಟ್ ಇರಲ್ಲ! ವಿವರ ಗಮನಿಸಿ

ಹಂಚಿಕೊಳ್ಳಿ
WhatsApp Facebook X Telegram
Shivamogga Power Cut ವಿದ್ಯುತ್​​ ವ್ಯತ್ಯಯ
Shivamogga Power Cut ವಿದ್ಯುತ್​​ ವ್ಯತ್ಯಯ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮೆಸ್ಕಾಂ ಶಿವಮೊಗ್ಗ ವಿಭಾಗ, ತನ್ನ ಪ್ರಕಟಣೆಯಲ್ಲಿ ಇವತ್ತು ವಿವಿದೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಅಂತಾ ತಿಳಿಸಿದೆ.ಜಿಲ್ಲೆಯ ಎರಡು ತಾಲ್ಲೂಕುಗಳ ಎರಡು ಪ್ರಮುಖ ಪ್ರದೇಶಗಳ ಹಲವು ಏರಿಯಾಗಳಲ್ಲಿ ಕರೆಂಟ್ ಇರಲ್ಲ ಎಂದು ಮುನ್ಸೂಚನೆ ನೀಡಿದೆ. ಅದರ ವಿವರ ಹೀಗಿದೆ.

ಭದ್ರಾವತಿಯಲ್ಲಿ ಇಂದು ವಿದ್ಯುತ್‌ ವ್ಯತ್ಯಯ

ಭದ್ರಾವತಿ: ಮೆಸ್ಕಾಂ ನಗರ ಉಪವಿಭಾಗ ಘಟಕ-2ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್‌ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಚನ್ನಗಿರಿ ರಸ್ತೆ, ಹೊಳೆಹೊನ್ನೂರು ರಸ್ತೆ, ಇಂದಿರಾ ನಗರ, ಅನ್ವರ್‌ಕಾಲೋನಿ, ದುರ್ಗಿನಗರ, ಅಮೀರ್‌ಜಾನ್ ಕಾಲೋನಿ, ಮೊಮಿನ್ ಮೊಹಲ್ಲಾ, ಖಲಂದರ್‌ನಗರ ಮತ್ತು ಜಟ್‌ಪಟ್ ನಗರ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಆನಂದಪುರಂನಲ್ಲೂ ಕರೆಂಟ್ ಇರಲ್ಲ

ಆನಂದಪುರಂ: ಮಲಂದೂರಿನ ವಿದ್ಯುತ್ ಮರು ಪ್ರಸರಣ ಘಟಕದಲ್ಲಿ ಇಂದು ಅಂದರೆ ನ.5ರಂದು ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಪ್ರಸರಣ ವ್ಯತ್ಯಯವಾಗಲಿದೆ. ಆನಂದಪುರಂ, ಯಡೆಹಳ್ಳಿ, ಆಚಾಪುರ, ಗೌತಮಪುರ, ಹೊಸೂರು, ತ್ಯಾಗರ್ತಿ, ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor