ಟರ್ನಿಂಗ್​ನಲ್ಲಿ ಆಚೀಚೆ ಹೋಗಿ, ಸೀದಾ ಮನೆ ಬಾಗಿಲಿಗೆ ಉರುಳಿ ಬಿದ್ದ ಲಾರಿ: ವಿಡಿಯೋ ಸ್ಟೋರಿ

ಹಂಚಿಕೊಳ್ಳಿ
WhatsApp Facebook X Telegram
Lorry Crashes into House Compound Near Kudumallige in Thirthahalli
Lorry Crashes into House Compound Near Kudumallige in Thirthahalli

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತಾಲೂಕಿನ ಕುಡುಮಲ್ಲಿಗೆ ಹತ್ರ ಲಾರಿಯೊಂದು ಸೀದಾ ಮನೆ ಬಾಗಿಲ ಬಳಿಯಲ್ಲಿ ಪಲ್ಟಿ ಹೊಡೆದು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಘಟನೆ ನಡೆದಿದ್ದು, ಮನೆ ಬಳಿಯಲ್ಲಿಯೇ ಲಾರಿ ಮಗುಚಿ ಬಿದ್ದಿದೆ. ಪರಿಣಾಮ ಮನೆ ಕಾಂಪೌಂಡ್ ಕುಸಿದುಬಿದ್ದಿದೆ. ಅದೃಷ್ಟಕ್ಕೆ ಲಾರಿ ಮನೆಯೊಳಗೆ ನುಗ್ಗಿಲ್ಲ. ಮೇಲಾಗಿ ಯಾರಿಗೂ ಘಟನೆಯಲ್ಲಿ ಪೆಟ್ಟಾಗಿಲ್ಲ.

ಕೆಎ 12 ರಿಜಿಸ್ಟ್ರೇಷನ್ ಗಾಡಿಯು ಕೃಷಿ ಉತ್ಪನ್ನಗಳನ್ನ ತುಂಬಿಕೊಂಡು ಹೋಗುತ್ತಿತ್ತು, ಸ್ಪೀಡ್ ಜಾಸ್ತಿ ಇದ್ದಿದ್ದರಿಂದಲೋ ಏನೋ, ಮನೆಯ ಪಾಗರದ ಕಲ್ಲಿಗೆ ಡಿಕ್ಕಿ ಹೊಡೆದ ಲಾರಿ ಅಲ್ಲೆ ಮಗಚ್ಕೊಂಡು ಬಿದ್ದಿದೆ. ಹಾಗಾಗಿ ಲಾರಿ ನುಜ್ಜುಗುಜ್ಜಾಗಿದ್ದು, ಕಾಂಪೌಂಡ್ ಪೂರ ಹೋಗಿದೆ. ಲಾರಿಯಲ್ಲಿದ್ದ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor