ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆ ಸಾರ್ವಜನಿಕರು ಹೆಚ್ಚಾಗಿ ಇರುವಂತಹ ಪ್ರದೇಶಗಳಲ್ಲಿ ಕೈಗಡಿಯಾರ, ಬಟ್ಟೆ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡುವವರನ್ನು ನೋಡಿಯೇ ಇರುತ್ತೀರಿ. ಇದೀಗ ಅವರ ವಿರುದ್ಧ ಸಾರ್ವಜನಿಕರೊಬ್ಬರು 112 ಪೊಲೀಸರಿಗೆ ದೂರು ನೀಡಿದ್ದಾರೆ.
ಹೌದು, ವಿನೋಬಾನಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ 112 ಪೊಲೀಸ್ ಸಿಬ್ಬಂದಿಗೆ ಫೋನ್ ಕಾಲ್ ಬಂದಿದೆ. ಅದನ್ನು ಸ್ವೀಕರಿಸಿದಾಗ, ಬಟ್ಟೆ ಹಾಗೂ ಕೈಗಡಿಯಾರ ಮಾರುವವರು ಬಸ್ ಸ್ಟ್ಯಾಂಡ್‌ನಲ್ಲಿ ಪ್ರಯಾಣಿಕರಿಗೆ ಬಟ್ಟೆಗಳನ್ನು ಹಾಗೂ ಇತರೆ ವಸ್ತುಗಳನ್ನು ಕೊಂಡುಕೊಳ್ಳುವಂತೆ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ವ್ಯಾಪಾರಿಗಳಿಗೆ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.
