ಜಂಬೂಸವಾರಿ ಅದ್ವಾನ ಎದ್ದೋಗಲು ಕೊನೆ ಕ್ಷಣದಲ್ಲಿ ಕೊಟ್ಟ ಆ ಸಲಹೆ ಕಾರಣವಾ? ಮುಂದಿದ್ದು ಹಿಂದೆ, ಹಿಂದಿದ್ದು ಮುಂದೆ ಮಾಡಿದ್ದಾರು! ಮಲೆನಾಡು ಟುಡೆ ಎನ್​​ಕ್ವೈರಿ

ಹಂಚಿಕೊಳ್ಳಿ
WhatsApp Facebook X Telegram
Shivamogga Dasara Elephant Incident Did Political Interference Cause Somanna's Panic
Shivamogga Dasara Elephant Incident Did Political Interference Cause Somanna's Panic

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಜಂಬೂಸವಾರಿ ಅದ್ವಾನ ಎದ್ದೋಗಲು ಆ ಸಲಹೆ ಕಾರಣವಾ? ಹೀಗೊಂದು ಗಂಭೀರ ಪ್ರಶ್ನೆ ಇಡೀ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ದಟ್ಟವಾಗಿ ವ್ಯಕ್ತವಾಗುತ್ತಿದೆ. ಸಾಗರ ಆನೆಯನ್ನು ಮುಂದೆ ಬಿಟ್ಟು ದಾರಿ ತೋರಿಸುವ ಕ್ರಮ ಕೈಗೊಂಡಿದ್ದ ಹೊರತಾಗಿ, ಅರಣ್ಯ ಅಧಿಕಾರಿಗಳಿಗೆ ಅಂಬಾರಿ ಹೊತ್ತಿರುವ ಆನೆಯನ್ನೆ ತಂದು ಮುಂದೆ ಬಿಡಬೇಕು ಎಂದು ಅಧಿಕಾರಯುತವಾಗಿ ಹೇಳಿದ ಆ ಸಲಹೆ ಯಾರದ್ದು!? ನಡೆದ ಘಟನೆಯ ಹೊಣೆಗಾರಿಕೆಯನ್ನು ಆ ಸಲಹೆ ನೀಡಿದವರು ಹೊರುತ್ತಾರಾ? ಆನೆಗಳ ತಲೆಬುಡ ಗೊತ್ತಿಲ್ಲದೆ ಕೊಟ್ಟ ಒಂದು ಸಲಹೆಯಿಂದ ಇಷ್ಟೆಲ್ಲಾ ನಡೆದ ಮೇಲೆ ಇದೀಗ ಬಲಿಪಶುಗಳನ್ನ ಸಸ್ಪೆಂಡ್ ಮಾಡುವುದಕ್ಕೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

ಮಲೆನಾಡು ಟುಡೆ ಎನ್​ಕ್ವೈರಿ ಪ್ರಕಾರ, ಸೋಮಣ್ಣ ಹೆದರು ಪುಕ್ಕಲು ಆನೆ! ತನ್ನೊಂದಿಗೆ ಸಹಪಾಠಿಗಳಿದ್ದರಷ್ಟೆ ಅದಕ್ಕೆ ಧೈರ್ಯ. ಈ ಹಿಂದಿನ ಕೆಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಸೋಮಣ್ಣ ಹೆದರಿ ಓಡಿತ್ತು. ಕಾಡಾನೆಗೆ ಹೆದರಿ ಓಡ್ತಿದ್ದ ಸೋಮಣ್ಣನನ್ನ ಅಂಬಾರಿ ಹೊರಲು ಆಯ್ಕೆ ಮಾಡಿದ್ದು ಯಾಕೆ ಎಂಬುದೇ ಮೊದಲ ಪ್ರಶ್ನೆ!

ಹಬ್ಬಕ್ಕೆ ನಾಲ್ಕು ದಿನ‌ ಮುಂಚೆ ಶಿವಮೊಗ್ಗಕ್ಕೆ ತಗೊಂಡು ಮೂರು ಆನೆಗಳಿಗೆ ಪ್ರತಿ ದಿನ ತಾಲೀಮು ನೀಡಲಾಗಿದೆ. ಈ ತಾಲೀಮಿನಲ್ಲಿ ಸಾಗರ ಮುಂದೆ ಹೋಗುತ್ತಿದ್ದ, ಸೋಮಣ್ಣ ಮಧ್ಯದಲ್ಲಿದ್ದರೇ ಹಾಗು ಬಹದ್ದೂರ್ ಹಿಂದೆ ಬರುತ್ತಿದ್ದ. ಹೀಗೆ ಹಿಂದೆ ಮುಂದೆ ಆನೆಗಳನ್ನ ಹಾಕಿಕೊಂಡು ಬರುತ್ತಿದ್ದ ಸೋಮಣ್ಣನ ಮೇಲೂ ಭಾರದ ದಿಂಬು ಹೊರಿಸ ಟ್ರೈನಿಂಗ್ ನೀಡಲಾಗಿತ್ತು. ಕೆಲವು ಹಂತದಲ್ಲಿ ಆತನನ್ನು ಸಹ ಮುಂದೆ ಬಿಟ್ಟು ತಾಲೀಮು ಮಾಡಲಾಗಿತ್ತು.

ಆದರೆ ಇಡೀ ಜಂಬೂಸವಾರಿ ದಾರಿಯನ್ನ ಪೂರ್ಣಗೊಳಿಸುವಷ್ಟೆ ಸೋಮಣ್ಣ ಶಕ್ತನಾಗಿದ್ದನಾ? ಯಾರಿಗೂ ಗೊತ್ತಿಲ್ಲ.! ಸೋಮಣ್ಣನೇ ಅಂಬಾರಿ ಹೊರಲು ಯೋಗ್ಯ ಎಂದು ಅನುಭವಿ ಮಾವುತರು ನೀಡಿದ ಸಲಹೆ ಮೇರೆಗೆ ಹಿರಿಯ ಅಧಿಕಾರಿಗಳು ಸೋಮಣ್ಣನನ್ನೆ ಪಟ್ಟದ ಆನೆ ಎಂದು ತೀರ್ಮಾನಿಸಿದ್ದರು. ಇದಾದ ಬಳಕ ಸೋಮಣ್ಣನಿಗೆ ಮುಂದೆ ಸಾರಥಿಯಾಗಿ ಸಾಗರ ಆಯ್ಕೆಯಾಗಿದ್ದ. ಟೇಲ್​ ಆಗಿ ಬಹದ್ದೂರ್ ಸಾಥ್ ನೀಡಿತ್ತು. ಸೋಮಣ್ಣನಿಗೆ ತನ್ನ ಮುಂದೆ ಸಾಗರ ಇದೆ ಎಂಬ ಧೈರ್ಯವಿತ್ತು.

ನಂದಿದ್ವಜ ಪೂಜೆಯ ಅರಂಭದ ಸಂದರ್ಭ ಎಲ್ಲವೂ ಚೆನ್ನಾಗಿಯೇ ಇತ್ತು. ತಾಲೀಮಿನ ನಂತೆಯೇ ಮದ್ಯದಲ್ಲಿ ಸೋಮಣ್ಣ ಅಂಬಾರಿ ಹೊತ್ತಿತ್ತು. ಮುಂದೆ ಸಾಗರ, ಹಿಂದೆ ಬಹದ್ದೂರ್ ಮೆರವಣಿಗೆಯಲ್ಲಿ ಸಾಗುತ್ತಿದ್ದವು. ಸುಮಾರು ಎಂಟು ನೂರು ಮೀಟರ್ ಮೆರವಣಿಗೆ ಸಾಗಿತ್ತು.ಈ ನಡುವೆ ಆ ಸಲಹೆಗಾರರು ಬಂದು, ಪಟ್ಟದ ಆನೆಯನ್ನ ಮುಂದೆ ಬಿಡಿ. ಸಾಗರನನ್ನ ಹಿಂದೆ ಕಳಿಸಿ ಎಂದು ಸೂಚಿಸಿದ್ದರಂತೆ.

ಹೀಗೆ ಬಂದ ಫರ್ಮಾನಿನಂತಹ ಸಲಹೆಗೆ ಅರಣ್ಯ ಇಲಾಖೆ ತಲೆಬಾಗಿದ್ದೆ ಇಲ್ಲಿ ಎಡವಟ್ಟಾಯಿತು ಎನ್ನಲಾಗಿದೆ. ಮೆರವಣಿಗೆ ಸ್ವರೂಪ ಬದಲಾಗಿದೆ. ಮುಂದೆ ಸಾಗುತ್ತಿದ್ದ ಸಾಗರ ಹಿಂದೆ ಬಂದ. ಆದರೆ ಅಲ್ಲಿಯವರೆಗೂ ನನ್ನ ಮುಂದೆ ಸಾಗರ್ ಆನೆ ಇದೆ ಎಂದು ದೈರ್ಯದಲ್ಲಿ ಸಾಗುತ್ತಿದ್ದ ಸೋಮಣ್ಣಗದ ಕ್ರಮೇಣವಾಗಿ ಭಯ ಕಾಡಲು ಆರಂಭಿಸಿದೆ.
ಸಾಗರನನ್ನ ನಂಬಿ ಮುಂದಕ್ಕೆ ಹೋಗುತ್ತಿದ್ದ ಸೋಮಣ್ಣ, ತನ್ನ ಎದುರಿಗೆ ಕಂಡ ಜನರ ಕೇಕೆ ಹರ್ಷೋದ್ಗಾರ, ವ್ಯಾದ್ಯಗಳ ಸದ್ದಿನಿಂದ ಭಯಬಿದ್ದು ಯೂಟರ್ನ್​ ತೆಗೆದುಕೊಂಡಿದ್ದಾನೆ.

ಇಲ್ಲಿ ಮುಂದೆ ನಡೆದ ಎಲ್ಲಾ ಘಟನೆಗಳಿಗೂ ಸಾಗರ ಆನೆಯನ್ನ ಹಿಂದಕ್ಕೆ ತಳ್ಳಿದ್ದೆ ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಹಲವು ವ್ಯಕ್ತಿಗಳನ್ನ ಸಂಪರ್ಕಿಸಿದಾಗ ಹಲವರಲ್ಲಿ ಈ ವಿಷಯ ಹೊರಬಿದ್ದಿದೆ.ಆದರೆ ಅವರ್ಯಾರು ಎಂಬ ಪ್ರಶ್ನೆಗೆ ಉತ್ತರ ಖಚಿತವಾಗಿಲ್ಲ!

ತನ್ನ ಎದುರಿದ್ದ ಆನೆ …ಕ್ಷಣಾರ್ಧದಲ್ಲಿ ಇಲ್ಲ ಎಂದಾದಾಗ ಎಂತಹ ಆನೆಯೂ ಕ್ಷಣಕಾಲ ಗೊಂದಲಕ್ಕೆ ಈಡಾಗುತ್ತದೆ. ಅನಾಥ ಪ್ರಜ್ಞೆ ಕಾಡಿ ಗಾಬರಿಗೊಳಗಾಗುತ್ತದೆ…ಎಂದು ನಿವೃತ್ತ ಹಿರಿಯ ಅನುಭವಿ ಮಾವುತರು ಹೇಳುತ್ತಾರೆ..ನೆನ್ನೆಯ ಘಟನೆಯಲ್ಲೂ ಸೋಮಣ್ಣ ಗಾಂಬರಿಗೊಂಡು…ತನ್ನ ಎದುರು ಹೋಗುತ್ತಿದ್ದ ಸಾಗರ ಆನೆ ಇಲ್ಲದಾಗ ಗಾಂಬರಿಗೊಂಡಿದೆ. ತಾನು ಬಂದ ಸ್ಥಳಕ್ಕೆ ವಾಪಸು ಹೋಗಲು ತಿರುಗಿದೆ..ಈ ಸಂದರ್ಭದಲ್ಲಿ ವಾಹನಗಳಿಗೆ ಗುದ್ದಿ ಅಂಬಾರಿ ಬೀಳಿಸಿದೆ, ಅದರ ಓಟ ತಾನಿದ್ದ ಸ್ಥಳಕ್ಕೆ ಹೋಗುವುದೇ ಆಗಿತ್ತು, ಆದರೆ ದಾರಿ ಗೊತ್ತಾಗದೆ ಗೊಂದಲ್ಲಕ್ಕೀಡಾಗಿ ಸಿಕ್ಕಸಿಕ್ಕಲ್ಲಿ ನುಗ್ಗಿತು ಎನ್ನುವುದು ಮಾವುತರೊಬ್ಬರ ಅಭಿಪ್ರಾಯ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor