ಒಂದು ವಾರದಿಂದ ಮನೆಗೆ ಬಾರದ ಮಗ ! ಮನವೊಲಿಸಿ ಮನೆಗೆ ಕರೆತಂದ 112 ಪೊಲೀಸರು!

ಹಂಚಿಕೊಳ್ಳಿ
WhatsApp Facebook X Telegram
shivamogga crime news iamge
shivamogga police

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಒಂದು ವಾರದಿಂದ ಮನೆಗೆ ಬಾರದೆ ಇದ್ದ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ನೆರವು ಕೋರಿ ಪೋಷಕರು 112 ತುರ್ತು ಸಹಾಯವಾಣಿಗೆ ಕರೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ವರದಿಯಾಗಿದೆ. ಇಲ್ಲಿನ ಠಾಣೆಯೊಂದರ ವ್ಯಾಪ್ತಿಯಲ್ಲಿ, ಇಂಹತದ್ದೊಂದು ಕರೆ ಸ್ವೀಕರಿಸಿದ 112 ತುರ್ತು ಸ್ಪಂದನಾ ವಾಹನದ (ERV) ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಸಮರ್ಪಕ ಮಾಹಿತಿ ಪಡೆದು ಯುವಕನಿಗೆ ತಿಳಿವಳಿಕೆ ಹೇಳಿ ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

112 ಪೊಲೀಸರು ಈ ನಿಟ್ಟಿನಲ್ಲಿ ವಿಶೇಷವಾದ ಕಾಳಜಿ ವಹಿಸಿದ್ದಾರೆ. ಇವರನ್ನ ಸಂಪರ್ಕಿಸಿದ್ದ ಪೋಷಕರೊಬ್ಬರು ತಮ್ಮ ಮಗ ಕಳೆದ ಒಂದು ವಾರದಿಂದ ಮನೆಗೆ ಬಂದಿಲ್ಲ. ಆತ ಕಾಲೇಜಿಗೆ ಹೋಗಿದ್ದು, ಆತನನ್ನು ಮನೆಗೆ ಕರೆದುಕೊಂಡು ಹೋಗಲು ಸಹಾಯ ಮಾಡುವಂತೆ ಮನವಿ ಮಾಡಿದ್ದರು.ಇನ್ನೂ ಸ್ಥಳಕ್ಕೆ ತೆರಳಿದ್ದ ಪೊಲೀಸರು ಪೋಷಕರು ಹಾಗೂ ಅವರ ಮಗನಿಂದ ನಡೆದ ವಿಚಾರ ತಿಳಿದು, ಆನಂತರ ತಿಳಿ ಹೇಳಿದ್ದಾರೆ. ಪೊಲೀಸರ ಮಾತಿಗೆ ಒಪ್ಪಿದ ಯುವಕ ಪೋಷಕರ ಜೊತೆಗೆ ತೆರಳಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor