ಸಾಗರದಲ್ಲಿ ಮತ್ತೆ ಮೇಲೆ ಬಂದು ಮಾನನಷ್ಟಕ್ಕೆ ಕಾರಣವಾಯ್ತು ‘ಬಾವಿ ಪಾಲಿಟಿಕ್ಸ್’

ಹಂಚಿಕೊಳ್ಳಿ
WhatsApp Facebook X Telegram
Belur Gopalakrishna .   mla beluru says CM Change Rumors Hurting Congress
Belur Gopalakrishna mla beluru says CM Change Rumors Hurting Congress

ಮಲೆನಾಡು ಟುಡೆ ಸುದ್ದಿ / ಸಾಗರ / ಸಾಗರ ನಗರಸಭೆಯ 18ನೇ ವಾರ್ಡ್ ಗಾಂಧಿನಗರದಲ್ಲಿರುವ ಸ್ವಾಮಿ ವಿವೇಕಾನಂದ ಗ್ರಂಥಾಲಯ ಆವರಣದ ಸಾರ್ವಜನಿಕ ಬಾವಿ ವಿಚಾರ ಇದೀಗ ಮತ್ತೊಂದು ಹಂತದ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ಮಧ್ಯೆ ಬಾವಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಮಾನನಷ್ಟಕ್ಕೆ ಕಾರಣವಾಯ್ತು ‘ಬಾವಿ ಪಾಲಿಟಿಕ್ಸ್’

ಬಾವಿ ಪಾಲಿಟಿಕ್ಸ್ ಬಗ್ಗೆ ಇವತ್ತು ಬಾವಿ ಪುರಾಣದ ಬಗ್ಗೆ ಖುದ್ದು ಫೀಲ್ಡ್​ಗೆ ಇಳಿದು ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಮನೆಯ ಪಕ್ಕದಲ್ಲಿರುವ ಈ ಬಾವಿ ಸಾಗರ ನಗರಸಭೆಗೆ ಸೇರಿದ ಸರ್ಕಾರಿ ಬಾವಿಯಲ್ಲ. ದಾಖಲೆಗಳ ಪ್ರಕಾರ ಇದು ಸರ್ಕಾರಿ ಬಾವಿ ಅಲ್ಲ ಎಂಬುದಕ್ಕೆ ಸಾಕ್ಷ್ಯವಿದೆ ಎಂದರು. ಅಲ್ಲದೆ ಸುಮಾರು 40 ವರ್ಷಗಳಿಂದ ಬಳಕೆಯಲ್ಲಿದ್ದ ಈ ಬಾವಿ ಗಾಂಧಿನಗರ ನಿವಾಸಿಗಳಿಗೆ ನೀರಿನ ಆಧಾರವಾಗಿತ್ತು ಎಂಬುದು ಸತ್ಯ! ಆದರೆ ಬಾವಿ ಮುಚ್ಚಲು ನಾನು ಕಾರಣನಲ್ಲ ಎಂದಿದ್ದಾರೆ.

ಇನ್ನೂ ನಾನು ಸಾಮಾನ್ಯ ಶಾಸಕನಾಗಿ ಸಾರ್ವಜನಿಕ ಬಾವಿಯನ್ನು ಮುಚ್ಚುವ ಕೆಲಸ ಮಾಡುವುದಿಲ್ಲ. ಈ ಬಾವಿಯನ್ನು ಮುಚ್ಚುವ ಮೊದಲು ಮತ್ತೊಂದು ಬಾವಿಯನ್ನು ತೆಗೆಸಲಾಗಿದೆ. ಆದರೂ ನನ್ನ ವಿರುದ್ಧ ಅಪಪ್ರಚಾರ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಎರಡ್ಮೂರು ಬಾರಿ ತಮ್ಮ ವಿರುದ್ಧ ಅಪವಾದ ಮೂಡುವಂತೆ ನಡೆದುಕೊಂಡಿದ್ದಾರೆ. ಈ ಬಾವಿ ವಿಚಾರವನ್ನು ರಾಜಕೀಯಗೊಳಿಸುವ ಉದ್ದೇಶದಿಂದ ತಮ್ಮ ಮನೆ ಸಮೀಪಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ . ಇತಿಹಾಸವಿರುವ ಕೆರೆಯನ್ನೇ ಒತ್ತುವರಿ ಮಾಡಿದ್ದಾರೆ. ಅಂತಹವರು ನಾನು ಬಾವಿ ಮುಚ್ಚಿದ್ದೇನೆ ಎಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದರು.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯವಾಗಿ ಗುರುತಿಸಿಕೊಳ್ಳಲು ಈ ರೀತಿಯ ಕುತಂತ್ರ ಮಾಡಲಾಗಿದೆ ಎಂದು ಆರೋಪಿಸಿದ ಬೇಳೂರು ಗೋಪಾಲಕೃಷ್ಣ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಒಟ್ಟು 4 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor