ತೀರ್ಥಹಳ್ಳಿ: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ, ಅಲ್ಲೂ ಮಹಡಿಯಿಂದ ಜಿಗಿದು ಸಾಯಲು ಯತ್ನ! ವಿಡಿಯೋ ಮೊಬೈಲ್​​​ನಲ್ಲಿ ಸೆರೆ

ಹಂಚಿಕೊಳ್ಳಿ
WhatsApp Facebook X Telegram
ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮತ್ತೆ ಸಾಯಲು ಯತ್ನ, ಮಲೆನಾಡು ಸುದ್ದಿ ಚಿತ್ರ
ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮತ್ತೆ ಸಾಯಲು ಯತ್ನ, ಮಲೆನಾಡು ಸುದ್ದಿ ಚಿತ್ರ

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ: ಸಾಯುವ ಸಮಯ ಬರಬೇಕೆಂದರೆ ನಾವು ನಿರೀಕ್ಷಿಸದ ರೀತಿಯಲ್ಲಿ ಸಾವು ಬರುತ್ತದೆ, ಅದೇ ರೀತಿ ಆಯುಸ್ಸು ಮುಗಿಯದೆ ಸಾಯಲು ಹೊರಟರೆ ಎಷ್ಟೇ ಪ್ರಯತ್ನ ಪಟ್ಟರೂ ಬದುಕಿ ಉಳಿಯುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನವೊಂದು ಸಿಕ್ಕಿದ್ದು, ಇಲ್ಲೊಬ್ಬ ವ್ಯಕ್ತಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದರೂ ಜೀವ ಉಳಿದಿದೆ.

ಹೌದು, ತೀರ್ಥಹಳ್ಳಿ ಮೂಲದ ವ್ಯಕ್ತಿಯೊಬ್ಬರು ಈ ಹಿಂದೆ ತಮ್ಮ ಮನೆಯಲ್ಲಿ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಆ ಯತ್ನ ವಿಫಲವಾಗಿ ಮನೆಯವರು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಸಿದ್ಧತೆ ಕೂಡ ನಡೆಸಲಾಗಿತ್ತು. ಆದರೆ ಮೊದಲೇ ಸಾಯಬೇಕೆಂದು ನಿರ್ಧರಿಸಿದ್ದ ವ್ಯಕ್ತಿಗೆ ಬದುಕುವ ಮನಸ್ಸಾದರೂ ಹೇಗೆ ಬರುತ್ತದೆ ಹೇಳಿ ಇವರಿಗೂ ಮತ್ತೊಮ್ಮೆ ಸಾಯುವ ಆಲೋಚನೆ ಬಂದಿದೆ.

ಈ ಹಿನ್ನೆಲೆಯಲ್ಲಿ ಅಲ್ಲಿದ್ದ ಸಿಬ್ಬಂದಿಗೆ ವಾಕಿಂಗ್ ಹೋಗಿ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಆಸಾಮಿ ಮತ್ತೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಆಸ್ಪತ್ರೆಯ ಕಿಟಕಿ ಹತ್ತಿ ಅಲ್ಲಿಂದ ಕೆಳಗೆ ಜಿಗಿದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆಸ್ಪತ್ರೆಯ ಸಿಬ್ಬಂದಿ ಅವರನ್ನು ರಕ್ಷಿಸಿ, ಎಮರ್ಜೆನ್ಸಿ ವಾರ್ಡ್‌ಗೆ ದಾಖಲಿಸಿದ್ದಾರೆ. ಬಿದ್ದ ರಭಸಕ್ಕೆ ವ್ಯಕ್ತಿಗೆ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಆತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor