ಶಿವಮೊಗ್ಗ ; ಅಯ್ಯೋ ಕಚ್ಚೇ ಬಿಡ್ತು, ನಾಗ್ರ ಹಾವ್​​ ಇರ್ಬೋದೇನೋ, ಬಸ್​​ ವೀಲ್​​ನಲ್ಲಿ ಅಡಗಿ ಕುಳಿತ ಹಾವಿನ ರಕ್ಷಣೆ? ವಿಡಿಯೋ ನೋಡಿ

ಹಂಚಿಕೊಳ್ಳಿ
WhatsApp Facebook X Telegram
ಬಸ್__ನ ವೀಲ್_ನಲ್ಲಿ ಅಡಗಿ ಕುಳಿತಿದ್ದ ಹಾವಿರ ರಕ್ಷಣೆ
ಬಸ್__ನ ವೀಲ್_ನಲ್ಲಿ ಅಡಗಿ ಕುಳಿತಿದ್ದ ಹಾವಿರ ರಕ್ಷಣೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಹಾವುಗಳು ಮನೆಯಲ್ಲಿ ಸಿಲಿಂಡರ್​​ನ ಕೆಳಭಾಗದಲ್ಲಿ, ಶೂನಲ್ಲಿ, ಬೈಕ್​ ನ ಸ್ಪೇರ್​​​ ಪಾರ್ಟ್​​ನಲ್ಲಿ – ಹೀಗೆ ಅನೇಕ ಪ್ರದೇಶಗಳಲ್ಲಿ ಅಡಗಿ ಕುಳಿತಿರುವುದನ್ನು ನೀವು ಕೇಳಿರ್ತೀರ, ಸಾಮಾನ್ಯವಾಗಿ ನೋಡಿಯೂ ಇರ್ತೀರ. ಆದ್ರೆ, ಬಸ್ಸೊಂದರ ವೀಲ್​​ ಒಳಗೆ ಹಾವು ಅಡಗಿ ಕುಳಿತಿದ್ದನ್ನು ಎಂದಾದರು ಕೇಳಿದ್ದೀರ? ಈ ವಿಚಾರ ಆಶ್ಚರ್ಯ ಅನಿಸಬಹುದು, ಆಶ್ಚರ್ಯ ಅನಿಸಿದ್ರೂ ಇದು ಸತ್ಯ. ಬಸ್​​ನ ವೀಲ್​ ಒಂದರಲ್ಲಿ ಕೆರೆಹಾವು ಅಡಗಿ ಕುಳಿತಿರುವ ಅಪರೂಪದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಹೌದು, ಶಿವಮೊಗ್ಗದ ಕೆಎಸ್​ ಆರ್​​​ ಟಿಸಿ ಡಿಪೋದಲ್ಲಿದ್ದ ಬಸ್ಸೋಂದರ ವೀಲ್​​ ಒಳಗೆ ವಿಷ ರಹಿತ ಕೆರೆ ಹಾವು ಅಡಗಿ ಕುಳಿತಿದ್ದು ವೀಲ್​ ಚೆಕ್​ ಮಾಡುವಾಗ ಇದು ಸಿಬ್ಬಂದಿಗಳ ಗಮನಕ್ಕೆ ಬಂದಿದೆ. ಈ ಸಂಬಂಧ ಸಿಬ್ಬಂದಿಗಳು ಕೂಡಲೇ ಉರಗ ರಕ್ಷಕ ಸ್ನೇಕ್​ ಕಿರಣ್​​ರಿಗೆ ಫೋನ್​ ಮಾಡಿದ್ದಾರೆ.

ಫೋನ್​ ಮಾಡಿದ ತಕ್ಷಣವೇ ಉರಗ ರಕ್ಷಕ ಸ್ನೇಕ್​ ಕಿರಣ್ ಸ್ಥಳಕ್ಕೆ ಬಂದಿದ್ದಾರೆ. ಬಂದು ನೋಡಿದಾಗ ಹಾವು ವೀಲ್​ ಒಳಗೆ ಕುಳಿತಿರುವುದು ಕಂಡುಬಂದಿದೆ. ಕೂಡಲೇ ಕೆಳಗಿಳಿದು ಸತತವಾಗಿ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಹಾವನ್ನು ಹೊರಗೆ ತೆಗೆದಿದ್ದಾರೆ.

ಹೊರ ತೆಗೆದ ಕೂಡಲೇ ಹಾವು ಓಡಲು ಆರಂಭಿಸಿತು. ಒಂದೆರಡು ಬಾರಿ ಸ್ನೇಕ್​ ಕಿರಣ್​ರವರಿಗೆ ಕಚ್ಚಲು ಸಹ ಪ್ರಯತ್ನಿಸಿತು. ಆದರೂ ಸಹ ಅದನ್ನು ಹಿಡಿಯುವಲ್ಲಿ ಸ್ನೇಕ್​​ ಕಿರಣ್​​​ ಯಶಸ್ವಿಯಾದರು. ಈ ಕಾರ್ಯಾಚರಣೆಯನ್ನು ನೋಡುತ್ತಾ ನಿಂತಿದ್ದ ಸಿಬ್ಬಂದಿಗಳು ಕೂಡ ಕೆಲ ಕಾಲ ಕಂಗಾಲಾದರು. ಕೆಲವರು, ಅಯ್ಯೋ ಕಚ್ಚೇ ಬಿಡ್ತು,​​​ ನಾಗರ ಹಾವು ಇರ್ಬೋದೇನೋ ಅಂತಿದ್ರೆ, ಇನ್​​ ಕೆಲವರು, ಏ ಅದು ಕಚ್ಚಲ್ಲ, ಬಾಲದಲ್ಲೇ ಹೊಡೆಯೋದು ಅಂತ ಮಾತಾಡ್ಕೋತಿದ್ದ ದೃಶ್ಯ ಅಲ್ಲಿ ಕಂಡುಬಂತು. ಒಟ್ನಲ್ಲಿ ಆ ಸ್ಥಳದಲ್ಲಿದ್ದ ಸಿಬ್ಬಂದಿಗಳು ಭಯ-ಕುತೂಹಲದಿಂದ ನೋಡುತ್ತಾ, ಕೂಗುತ್ತಾ ನಿಂತಿದ್ದರೆ, ಇತ್ತ ಹಾವು ಬಡ ಜೀವ ಬದುಕೋತು ಅಂತ ಕಾಡು ಸೇರ್ತು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor