ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ; ಶಿವಮೊಗ್ಗದ ಕರ್ನಾಟಕ ಸಂಘದ ಬಳಿ ವಿದ್ಯಾರ್ಥಿನಿಯರಿಗೆ ಸಾರ್ವಜನಿಕವಾಗಿ ಉಪಟಳ ನೀಡುತ್ತಿದ್ದ ವ್ಯಕ್ತಿಯನ್ನು ಅಕ್ಕಪಡೆ ಸಿಬ್ಬಂದಿಗಳು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರದಲ್ಲಿ ಅಪರಾಧವನ್ನು ತಡೆಯುವ ದೃಷ್ಟಿಯಿಂದ ಅಕ್ಕಪಡೆಯನ್ನು ಜಾರಿಗೆ ತರಲಾಗಿದೆ. ಅಕ್ಕಪಡೆ ಸಿಬ್ಬಂದಿಗಳು ನಗರದಾದ್ಯಂತ ಗಸ್ತು ತಿರುಗುವ ಮೂಲಕ ಅಸಹಾಯಕರಿಗೆ ಸಹಾಯ ಮಾಡುತ್ತಾ, ತಪ್ಪು ಮಾಡುವ ಪುಂಡರಿಗೆ ಎಚ್ಚರಿಕೆ ನೀಡುತ್ತಾ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ.
ಹೀಗೆ ಶಿವಮೊಗ್ಗ ಅಕ್ಕ ಪಡೆಯ ಅಧಿಕಾರಿ ಸಿಬ್ಬಂದಿಗಳಾದ ಲೀಲಾವತಿ, ಎ.ಎಸ್ಐ, ಶಾಂತ ಹೆಚ್.ಸಿ., ಕಾವ್ಯಶ್ರೀ (ಸಿಬ್ಬಂದಿ) ಗಸ್ತು ತಿರುಗುತ್ತಿದ್ದಾಗ ಪುಂಡನೊಬ್ಬ ಕರ್ನಾಟಕ ಸಂಘದ ಬಳಿ ವಿದ್ಯಾರ್ಥಿನಿಯರಿಗೆ ಸಾರ್ವಜನಿಕವಾಗಿ ಉಪಟಳ ನೀಡುತ್ತಿದ್ದದ್ದು ಕಂಡು ಬಂದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಆತನನ್ನು ಕೋಟೆ ಪೊಲೀಸ್ ಠಾಣೆಗೆ ಕರೆತಂದು ಲಘು ಪ್ರಕರಣವನ್ನು ದಾಖಲಿಸಲಾಗಿದ್ದು, ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.ಣವನ್ನು ದಾಖಲಿಸಲಾಗಿದ್ದು, ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ
