ಶಿವಮೊಗ್ಗ ; ನಮ್ಮ ತಂದೆ ಬಂದ ಮೇಲೆ ಬಿಎಸ್​ವೈ, ಕೆಎಸ್​​ಇ ರಾಜಕೀಯವಾಗಿ ಬದುಕಿದ್ದು, ತಾಕತ್ತಿದ್ದರೆ ಗೆದ್ದು ಬರಲಿ ಎಂಬ ಸಂಸದರ ಹೇಳಿಕೆಗೆ ಸಚಿವರು ಹೇಳಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
ಬಿವೈ ರಾಘವೇಂದ್ರ ವಿರುದ್ದ ಸಚಿವ ಮಧು ಬಂಗಾರಪ್ಪ ವಾಗ್ದಾಳಿ
ಬಿವೈ ರಾಘವೇಂದ್ರ ವಿರುದ್ದ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

 ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ನಮ್ಮ ತಂದೆ ಎಸ್​ ಬಂಗಾರಪ್ಪರವರು 2004 ರಲ್ಲಿ ಬಿಜೆಪಿಗೆ ಬಂದ ಮೇಲೆ ಬಿ ಎಸ್​ ಯಡಿಯೂರಪ್ಪ ಹಾಗೂ ಕೆ,ಎಸ್​ ಈಶ್ವರಪ್ಪ ರಾಜಕೀಯವಾಗಿ ಬದುಕಿದ್ದು, ಅದಕ್ಕೂ ಮೊದಲು ಕಾಂಗ್ರೆಸ್​​ನಲ್ಲಿ ನಮ್ಮ ತಂದೆಯವರ ಅಧ್ಯಕ್ಷತೆಯಲ್ಲಿ ಇಬ್ಬರನ್ನೂ ಎಲೆಕ್ಷನ್​ನಲ್ಲಿ ಹೊರಗೆ ಕಳುಹಿಸಿದ್ದರು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಿಕಾರಿಪುರದಲ್ಲಿ ಸಂಸದ ಬಿ.ವೈ. ರಾಘವೇಂದ್ರರವರು ಸಚಿವ ಮಧುಬಂಗಾರಪ್ಪರಿಗೆ ತಾಕತ್ತಿದ್ದರೆ ಸೊರಬಾದಲ್ಲಿ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಲಿ ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಈ ಕುರಿತಾಗಿ ಮಾತನಾಡಿದ ಅವರು, ನನ್ನ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಮಾತನಾಡುತ್ತಾರೆ. ಅವರ ತಂದೆ ಯಡಿಯೂರಪ್ಪ ಅವರನ್ನ ಜನರು ಮೊದಲು ಚುನಾವಣೆಯಲ್ಲಿ ಸೋಲಿಸಿ ಕಳುಹಿಸಿದ್ದರು. ನಮ್ಮ ತಂದೆ 2004 ರಲ್ಲಿ ಬಿಜೆಪಿಗೆ ಬಂದ ಮೇಲೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಗೆದ್ದು ಬದುಕಿದರು, ಅನೇಕ ಚುನಾವಣೆಗಳಲ್ಲಿ ಸಂಸದರು ಅವರ ಅಪ್ಪನಿಗಾಗಿ ವೋಟು ಕೇಳಲಿಲ್ಲ. ಆದರೆ, ನಾನು ಬಂದು ಯಡಿಯೂರಪ್ಪರಿಗಾಗಿ ವೋಟ್ ಕೇಳಿದ್ದೆ. 2009 ರ ಚುನಾವಣೆಯಲ್ಲಿ ಸಂಸದ ರಾಘವೇಂದ್ರ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತು. ಆಗ ಅಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳನ್ನು ಚುನಾವಣೆಗೆ ಹೇಗೆ ಬಳಸಿಕೊಂಡರು ಎಂಬುದು ನಮಗೂ ತಿಳಿದಿದೆ, ಎಂದು ಆರೋಪಿಸಿದರು.

ನಾನು ಜಾತಿ ರಾಜಕಾರಣ ಮಾಡುವುದಿಲ್ಲ, ನನಗೆ ಅದರ ಅವಶ್ಯಕತೆಯೂ ಇಲ್ಲ. ನಾನು ಸಂವಿಧಾನವನ್ನು ಮತ್ತು ಮಕ್ಕಳನ್ನು ಮೊದಲ ಸ್ಥಾನದಲ್ಲಿ ಮತ್ತು ದೇವರನ್ನು ಎರಡನೇ ಸ್ಥಾನದಲ್ಲಿ ಇಟ್ಟಿದ್ದೇನೆ, ಅವರು ಏನೇನು ಮಾತನಾಡುತ್ತಾರೋ ಮಾತನಾಡಿಕೊಳ್ಳಲಿ ಎಂದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor