ಹಾವನ್ನು ತಪ್ಪಿಸಲು ಹೋಗಿ ಪಲ್ಟಿಯಾದ ಕಾರು; ಆನಂದಪುರದ ಬಳಿ ಮಂಗಳೂರು ಮೂಲದ ದಂಪತಿ, ಮಗು ಅಪಾಯದಿಂದ ಪಾರು

ಹಂಚಿಕೊಳ್ಳಿ
WhatsApp Facebook X Telegram
Car Overturns While Avoiding Snake Near Anandapura
Car Overturns While Avoiding Snake Near Anandapura

ಮಲೆನಾಡು ಟುಡೆ ಸುದ್ದಿ / ಆನಂದಪುರ / ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಲಾಗಿ ಬಂದ ಹಾವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಚರಂಡಿಗೆ ಪಲ್ಟಿಯಾದ ಘಟನೆ ಆನಂದಪುರ ಸಮೀಪ ಭಾನುವಾರ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮಗು ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರು ಮೂಲದ ಗಂಡ, ಹೆಂಡತಿ ಹಾಗೂ ಮಗು ಪಾರು

ಗಂಡ, ಹೆಂಡತಿ ಹಾಗೂ ಮಗು ಕಾರಿನಲ್ಲಿ ಸಾಗರದಿಂದ ಆನಂದಪುರದ ಕಡೆಗೆ ತೆರಳುತ್ತಿದ್ದರು. ಆನಂದಪುರ ಸಮೀಪದ ಸಿದ್ದೇಶ್ವರ ಕಾಲೋನಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ಹಾವು ರಸ್ತೆಗೆ ಅಡ್ಡವಾಗಿ ಬಂದಿದೆ. ಹಾವನ್ನು ತಪ್ಪಿಸುವ ಪ್ರಯತ್ನದಲ್ಲಿ ಚಾಲಕ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಕಾರು ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿದೆ. ಕಾರು ಪಲ್ಟಿಯಾದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಕಾರಿನೊಳಗಿದ್ದ ದಂಪತಿ ಹಾಗೂ ಮಗುವನ್ನು ರಕ್ಷಿಸಿ ಹೊರಗೆ ಕರೆತಂದಿದ್ದಾರೆ. ಘಟನೆಯಲ್ಲಿ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor