ವರದಹಳ್ಳಿಯಲ್ಲಿ ಅ.11ರಿಂದ 20ರವರೆಗೆ ನವರಾತ್ರಿ ಉತ್ಸವ; ಪ್ರತಿದಿನ ವಿಶೇಷ ದುರ್ಗಾ ಆವಾಹನೆ ! ಕಾರ್ಯಕ್ರಮದ ಪಟ್ಟಿ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
varadahalli-sri-rama-durgamba-temple-navaratri-festival-october-11-20
varadahalli-sri-rama-durgamba-temple-navaratri-festival-october-11-20

ಮಲೆನಾಡು ಟುಡೆ ಸುದ್ದಿ / ಸಾಗರ / ತಾಲೂಕಿನ ವರದಹಳ್ಳಿಯ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಶ್ರೀರಾಮ ದುರ್ಗಾಂಬಾ ದೇವರ ವ್ಯವಸ್ಥಾಪನಾ ಸಮಿತಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನವರಾತ್ರಿ ಉತ್ಸವದ ವಿವಿಧ ಕಾರ್ಯಕ್ರಮಗಳ ಮಾಹಿತಿ ಇಲ್ಲಿ ನೀಡಲಾಗುತ್ತಿದೆ.

  • ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 11ರಂದು ಬೆಳಗ್ಗೆ ಶ್ರೀದುರ್ಗಾ ಆವಾಹನೆ ಹಾಗೂ ಕಲೋಕ್ತ ಪೂಜೆ ನೆರವೇರಲಿದೆ.
  • ಅಕ್ಟೋಬರ್ 12ರಂದು ಶ್ರೀಆರ್ಯಾ ದುರ್ಗಾ ಆವಾಹನೆ, 13ರಂದು ಭಗವತೀ ದುರ್ಗಾ ಆವಾಹನೆ, 14ರಂದು ಕುಮಾರಿ ದುರ್ಗಾ ಆವಾಹನೆ ನಡೆಯಲಿದೆ.
  • ಅಕ್ಟೋಬರ್ 15ರ ಲಲಿತಾ ಪಂಚಮಿಯಂದು ಬೆಳಗ್ಗೆ ಅಂಬಿಕಾ ದುರ್ಗಾ ಆವಾಹನೆ ನಡೆಯಲಿದೆ. ಅಕ್ಟೋಬರ್ 16ರ ಶುಕ್ರವಾರ ಬೆಳಗ್ಗೆ ಮಹಿಷಮರ್ಧಿನಿ ದುರ್ಗಾ ಆವಾಹನೆ ಜರುಗಲಿದೆ
  • 17ರಂದು ಚಂಡಿಕಾ ದುರ್ಗಾ ಆವಾಹನೆ, 18ರಂದು ಸರಸ್ವತಿ ದುರ್ಗಾ ಆವಾಹನೆ ಹಾಗೂ 19ರಂದು ವಾಗೇಶ್ವರಿ ದುರ್ಗಾ ಆವಾಹನೆ ನೆರವೇರಲಿದೆ.
  • ಅಕ್ಟೋಬರ್ 20ರ ನವಮಿ ದಿನ ದುರ್ಗಾಂಬಾ ದೇವಿಗೆ ಕಲೋಕ್ತ ಪೂಜೆ ನಡೆಯಲಿದೆ. ಇದೇ ವೇಳೆ ವಿಜಯದಶಮಿ ಅಂಗವಾಗಿ ಶ್ರೀದೇವಿಯ ಪಲ್ಲಕ್ಕಿ ಉತ್ಸವ, ಶಮೀ ವೃಕ್ಷ ಪೂಜೆ, ರಾಜೋಪಚಾರ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor