ಶಿವಮೊಗ್ಗ ; ಜೈಲಿನ ಬಳಿ  ಪೊಲೀಸರನ್ನ ನೋಡ್ತಿದ್ದಂತೆ ನೀಲಗಿರಿ ತೋಪಿಗೆ ಓಡಿದ ಆರೋಪಿಗಳು, ಸೆರೆ ಸಿಕ್ಕಾಗ ತಿಳೀತು ಸತ್ಯ ?

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಜೈಲಿನಲ್ಲಿರುವ ಆರೋಪಿಗಳಿಗೆ ಗಮ್ ಟೇಪ್ ಸುತ್ತಿ ಫೋನ್ ಎಸೆಯಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ತುಂಗಾನಗರ ಪೊಲೀಸರು ಬಂದಿಸಿದ್ದಾರೆ.

ಘಟನೆ ವಿವರ

ಜೈಲರ್ ಜಗದೀಶ್‌ರವರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ, ಸೆಪ್ಟೆಂಬರ್ 20 ರಂದು ಮಧ್ಯಾಹ್ನ ಸುಮಾರು 3:40 ಕ್ಕೆ ಜೈಲಿನ ಪಶ್ಚಿಮ ಕಾಂಪೌಂಡ್ ಗೋಡೆಯ ಬಳಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ನಿಂತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ತಕ್ಷಣವೇ ಇಬ್ಬರು ಸಿಬ್ಬಂದಿ ಅವರನ್ನು ಹಿಡಿಯಲು ಯತ್ನಿಸಿದಾಗ, ಆರೋಪಿಗಳು ನೀಲಗಿರಿ ತೋಪಿನ ಕಡೆಗೆ ಓಡಿ ಪರಾರಿಯಾಗಿದ್ದರು. ಸಿದ್ಧರಗುಡಿ ಸುತ್ತಮುತ್ತ ಹುಡುಕಾಡಿದರೂ ಆರಂಭದಲ್ಲಿ ಅವರು ಪತ್ತೆಯಾಗಲಿಲ್ಲ.

ಬಳಿಕ ಸಂಜೆ ವೇಳೆ ಜೈಲಿನ ಮುಖ್ಯದ್ವಾರ ಹಾಗೂ ಸಿದ್ಧರಗುಡಿ ರಸ್ತೆಯಲ್ಲಿ ಅದೇ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಡೆದಾಡುತ್ತಿದ್ದುದನ್ನು ಗಮನಿಸಿದ ಪೊಲೀಸರು  ಉಸ್ತುವಾರಿ ಅಧಿಕಾರಿಗೆ ತಿಳಿಸಿದರು. ಪೊಲೀಸರನ್ನು ಕಂಡ ಕ್ಷಣವೇ ತಕ್ಷಣ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಸುತ್ತುವರೆದು ಬಂಧಿಸಿದ್ದಾರೆ.ಬಂಧಿತರನ್ನು ಶಿವಮೊಗ್ಗದ ಸಿದ್ಧೇಶ್ವರ ನಗರದ ಮಹಮ್ಮದ್ ಸಮೀವುಲ್ಲಾ ಮತ್ತು ವಿದ್ಯಾನಗರದ ಇರ್ಫಾನ್ ಎಂದು ಗುರುತಿಸಲಾಗಿದೆ.

ಇಬ್ಬರು ಆರೋಪಿಗಳನ್ನು ವಿಚಾರಿಸಿದಾಗ , ಜೈಲಿನೊಳಗೆ ವಸ್ತುಗಳನ್ನು ಎಸೆಯಲು ಮಧ್ಯಾಹ್ನ 1 ಗಂಟೆಯಿಂದ ಹೊಂಚು ಹಾಕುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇರ್ಫಾನ್ ಪಶ್ಚಿಮ ಗೋಡೆ ಕಡೆಯಿಂದ ಕಲ್ಲೆಸೆದು ಟೆಸ್ಟ್​ ಮಾಡಿದ್ದು, ನಂತರ  ಸಂಜೆ 7 ಗಂಟೆಗೆ ಎಸ್‌ಟಿಪಿ ಘಟಕದ ಕಡೆಯಿಂದ ವಸ್ತು ಎಸೆಯಲು ಬಂದಿದ್ದಾಗಿ ತಿಳಿಸಿದ್ದಾರೆ.

ಆರೋಪಿಗಳ ಬೈಕ್ ತಪಾಸಣೆ ಮಾಡಿದಾಗ, ಮುಂಭಾಗದ ಮಡ್‌ಗಾರ್ಡ್ ಒಳಗೆ ಕಪ್ಪು ಗಮ್ ಟೇಪ್‌ನಿಂದ ಸುತ್ತಿದ್ದ  2 ನೋಕಿಯಾ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.  ಆರೋಪಿಗಳ ವಿರುದ್ದ ವಿವಿಧ ಕಾಲಂಗಳಡಿ ಪ್ರಕರಣ ದಾಖಲಾಗಿದೆ,

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor