ಶಿವಮೊಗ್ಗ: ನಿನ್ನೆಗಿಂತ ಅಡಿಕೆ ರೇಟ್ ಕಡಿಮೆ ಆಯ್ತು ಇವತ್ತು, ಹಾಗಾದರೆ ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ರೇಟ್?

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ; ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ದಿನದಿಂದ ದಿನಕ್ಕೆ ಹಾವ-ಏಣಿಯಾಟ ಆಡುತ್ತಿದೆ. ಒಮ್ಮೊಮ್ಮೆ ಆಮೆ ಸ್ಪೀಡ್‌ನಲ್ಲಿ ರೇಟ್ ಏರಿದರೆ, ಇನ್ನು ಕೆಲವೊಮ್ಮೆ ಕುದುರೆ ಸ್ಪೀಡ್‌ನಲ್ಲಿ ರೇಟ್ ಇಳಿಯುತ್ತದೆ. ನಿನ್ನೆಗಿಂತ ಇವತ್ತು ಕುದುರೆ ಸ್ಪೀಡ್‌ನಲ್ಲಿ ರೇಟ್ ಇಳಿದಿದ್ದು, ನಿನ್ನೆಗೆ ಹೋಲಿಸಿದರೆ ಇವತ್ತು ರಾಶಿ ಇಡಿ ರೇಟ್‌ನಲ್ಲಿ ಬರೋಬ್ಬರಿ 1 ಸಾವಿರ ರೂಪಾಯಿ ಕಡಿಮೆಯಾಗಿದೆ.

ಹಾಗಾದರೆ ಇನ್ನುಳಿದ ಅಡಿಕೆ ದರಗಳ ಕಥೆ ಏನು? ನಿನ್ನೆಗಿಂತ ಅವುಗಳ ರೇಟ್ ಹೆಚ್ಚಾಯ್ತಾ, ಕಡಿಮೆಯಾಯ್ತಾ? ಎಪಿಎಂಸಿ ಮಾರುಕಟ್ಟೆಯಲ್ಲಿ ಹಸ, ಹೊಸ ರಾಶಿಇಡಿ, ಗೊರಬಲು, ಬೆಟ್ಟೆಗಳ ಕನಿಷ್ಠ, ಗರಿಷ್ಠ, ಮಾದರಿ ದರಗಳು ಎಷ್ಟಿದೆ ಅಂತ ತಿಳ್ಕೊಳ್ಳೋಕೆ ಈ ಕೆಳಗಿನ ಚಾರ್ಟ್ ನೋಡಿ.

 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಶಿವಮೊಗ್ಗದ ಅಡಿಕೆ ಧಾರಣೆ ವಿವರ (ದಿನಾಂಕ: 23/09/2026):

  • ಸರಕು/ಹಸ: ಕನಿಷ್ಠ: 55,299 | ಗರಿಷ್ಠ: 88,299 | ಮಾದರಿ: 83,099
  • ಬೆಟ್ಟೆ: ಕನಿಷ್ಠ: 49,000 | ಗರಿಷ್ಠ: 59,099 | ಮಾದರಿ: 54,709
  • ರಾಶಿಇಡಿ: ಕನಿಷ್ಠ: 43,009 | ಗರಿಷ್ಠ: 48,499 | ಮಾದರಿ: 46,500
  • ಗೋರಬಲು: ಕನಿಷ್ಠ: 19,039 | ಗರಿಷ್ಠ: 39,367 | ಮಾದರಿ: 34,366
  • ಹೊಸರಾಶಿಇಡಿ: ಕನಿಷ್ಠ: 43,289 | ಗರಿಷ್ಠ: 46,059 | ಮಾದರಿ: 45,509
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor