ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಹೆಚ್ಚಾಗಿ ಕೌಟುಂಬಿಕ ಹಾಗು ಕ್ಲಾಸ್ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸುತ್ತಿದ್ದ ಲವ್ಲಿ ಸ್ಟಾರ್ ಪ್ರೇಮ್ ಇದೀಗ ಮೊದಲ ಬಾರಿಗೆ ಖಳನಾಯಕನಾಗಿ ನಟಿಸುತ್ತಿರುವ ಸ್ಪಾರ್ಕ್ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ವಿಶೀಷವೆಂದರೆ ಸಿನಿಮಾದ ಮೊಟ್ಟಮೊದಲ ಪ್ರದರ್ಶನವನ್ನು ಶಿವಮೊಗ್ಗದಲ್ಲೇ ಆಯೋಜಿಸಲಾಗಿದ್ದು, ಸಂಪೂರ್ಣ ಚಿತ್ರತಂಡ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದೆ.
ಹೌದು ರಿಯಲ್ ಸ್ಟಾರ್ ಉಪೇಂದ್ರರವರ ಅಣ್ಣನ ಮಗ ನಿರಂಜನ್ ಸುಧೀಂದ್ರರವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಸ್ಪಾರ್ಕ್ ಚಿತ್ರ ರಾಜ್ಯದಾಧ್ಯಂತ ಸೆ. 25 ರಂದು ಬಿಡುಗಡೆಯಾಗುತ್ತಿದೆ. ಇದರ ನಡುವೆ ಚಿತ್ರತಂಡ ಪ್ರೀಮಿಯರ್ ಶೋ ಒಂದನ್ನು ಅರೇಂಜ್ ಮಾಡಿದ್ದು, ಚಿತ್ರ ಬಿಡುಗಡೆಯಾಗುವ ಮೂರು ದಿನದ ಮುನ್ನ ಅಂದರೆ ಸೆ,22 ರಂದು ಮಂಗಳವಾರ ಸಂಜೆ 7 ಗಂಟೆಗೆ ಶಿವಮೊಗ್ಗದ ಭಾರತ್ ಸಿನಿಮಾಸ್ ಅಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ.
ಸ್ಪಾರ್ಕ್ ಚಿತ್ರ ಶಿವಮೊಗ್ಗದಲ್ಲಿಯೇ ಮೊದಲು ಪ್ರದರ್ಶನ ಕಾಣೋಕೆ ಕಾರಣವೇನೆಂದರೆ ಶಿವಮೊಗ್ಗದ ಗುಡ್ಡೆಕಲ್ ನಲ್ಲಿ ಹುಟ್ಟಿ ಬೆಳೆದ ವಿಶ್ವಾಸ್ ಮುರಳೀಧರ ನಾಯರ್, ಹೌದು ವಿಶ್ವಾಸ್ ಸ್ಪಾರ್ಕ್ ಸಿನಿಮಾದಲ್ಲಿ ಲೈನ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆ ಅವರ ಒತ್ತಾಯದ ಮೇರೆಗೆ ಸಿನಿಮಾದ ಮೊಟ್ಟಮೊದಲ ಪ್ರದರ್ಶನವನ್ನು ಹುಟ್ಟೂರಾದ ಶಿವಮೊಗ್ಗದಲ್ಲೇ ಆಯೋಜಿಸಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.
ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಬೃಹತ್ ತಾರಾಬಳಗವೇ ಇದೆ, ಜಾಕಿ ಭಾವನ, ರಚನಾ ಇಂದೇರ್, ಲವ್ಲಿ ಸ್ಟಾರ್ ಪ್ರೇಮ್ ಸೇರಿದಂತೆ ಅನೇಕ ಘಾಟಾನುಘಟಿ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಹಾಂತೇಶ್ ಹಂದ್ರಾಳ್ ಎಂಬುವವರು ಚಿತ್ರವನ್ನು ನಿರ್ದೇಶಿಸಿದ್ದು, ಗರೀಮಾ ಅವಿನಾಶ್ ವಸಿಷ್ಠ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಲವ್ಲಿಸ್ಟಾರ್ ಪ್ರೇಮ್ ಮೊದಲ ಬಾರಿಗೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಹೌದು ಪ್ರೇಮ್ ಇದುವರೆಗೂ ಯಾವ ಸಿನಿಮಾದಲ್ಲಿಯೂ ಸಹ ಖಳನಾಯಕನಾಗಿ ಕಾಣಿಸಿಕೊಂಡಿರಲಿಲ್ಲ, ಆದರೆ ಈ ಚಿತ್ರದಲ್ಲಿ ಅವರು ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ.ಇದುವರೆಗೂ ಲವರ್ ಬಾಯ್, ಕೌಟುಂಬಿಕ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ, ಪ್ರೇಮ್ ಈ ಚಿತ್ರದಲ್ಲಿ ಯಾವರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
