ನೈಟ್ ಫುಲ್​ ಚಿತ್ ಆಗಿ ಆಟೋ ಓಡಿಸಿದ ಚಾಲಕನ ವಿರುದ್ಧ ಕೇಸ್! ರಿಕ್ಷಾ ಸೀಜ್!

ಹಂಚಿಕೊಳ್ಳಿ
WhatsApp Facebook X Telegram
Shivamogga Auto Driver Booked for Rash Driving, Drunk Driving Confirmed
Shivamogga Auto Driver Booked for Rash Driving, Drunk Driving Confirmed

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಪುಲ್ ಚಿತ್ ಆಗಿ ಸಿಟಿಯಲ್ಲಿ ಅಡ್ಡಾದಿಡ್ಡಿಯಾಗಿ ಆಟೋ ರಿಕ್ಷಾ ಚಾಲನೆ ಮಾಡಿದ ಆರೋಪದ ಮೇಲೆ ಚಾಲಕನ ವಿರುದ್ಧ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಟಿ ಏರಿಯಾದಲ್ಲಿಯೇ ಆಟೊವೊಂದನ್ನ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿರುವ ದೃಶ್ಯದ ವಿಡಿಯೊ ಕಂಟ್ರೋಲ್ ರೂಂ ಮೂಲಕ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ವಾಟ್ಸಾಪ್ ವಿಡಿಯೊ ಗ್ರೂಪ್‌ಗೆ ಬಂದಿತ್ತು. ಬಳಿಕ ವಿಡಿಯೊವನ್ನು ಪರಿಶೀಲಿಸಿದ ಪೊಲೀಸರು ಆಟೊ ಚಾಲಕನ ವಿಳಾಸ ಪತ್ತೆ ಹಚ್ಚಿ ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ತಪಾಸಣೆ ವೇಳೆ ಚಾಲಕ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿರುವ ಹಿನ್ನೆಲೆಯಲ್ಲಿ ಆಟೊ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನ ವಿರುದ್ಧ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor