ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಸದಾಪುರ ಗ್ರಾಮದ ನಿವಾಸಿ ರಮೇಶ ನಾಯ್ಕ, 37 ವರ್ಷ ಇವರು ಆಗಸ್ಟ್ 18 ರಂದು ಬೆಳಿಗ್ಗೆ ಸುಮಾರು 8:30 ಕ್ಕೆ ಅವರ ಮನೆಯಿಂದ ಹೊರಗೆ ಹೋದವರು ಹಿಂತಿರುಗಿ ಬಂದಿರುವುದಿಲ್ಲ. ಈ ಕುರಿತು ಅವರ ಪತ್ನಿ ಸುಮಾಬಾಯಿ ಅವರು ನೀಡಿದ ದೂರಿನನ್ವಯ ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಕಾಣೆಯಾದ ವ್ಯಕ್ತಿಯು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿಮೈಬಣ್ಣ,ತಲೆಯಲ್ಲಿ ಮೂರು ಇಂಚು ಉದ್ದದ ಕಪ್ಪು ಕೂದಲು ಹೊಂದಿದ್ದು, ಕನ್ನಡ, ಲಂಬಾಣಿ ಹಾಗೂ ಹಿಂದಿ ಮಾತನಾಡುತ್ತಾರೆ. ಕಾಣೆಯಾದ ವೇಳೆ ನೀಲಿ-ಕೆಂಪು ಬಣ್ಣದ ತುಂಬು ತೋಳಿನ ಚೌಕುಳಿ (ಚೆಕ್ಸ್) ಶರ್ಟ್ ಹಾಗೂ ನೀಲಿ ಬಣ್ಣದ ಪಂಚೆ ಧರಿಸಿದ್ದರು.
ಈ ಚಹರೆಯ ವ್ಯಕ್ತಿ ಕಂಡುಬಂದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಸಾರ್ವಜನಿಕರು ತಕ್ಷಣವೇ ಶಿರಾಳಕೊಪ್ಪ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 8722983310 ಮೊಬೈಲ್ ಸಂಖ್ಯೆ: 9480803367 ಇಮೇಲ್: [email protected] ನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ಕೋರಲಾಗಿದೆ
