ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ನಗರದ ಶಂಕರ ಮಠ ರಸ್ತೆಯಲ್ಲಿರುವ ರಾಹುಲ್ ಹುಂಡೈ ಶೋರೂಮ್ನ (Rahul Hyundai Showroom) ಮುಂಭಾಗದ ನೇಮ್ಪ್ಲೇಟ್ಗೆ ಗುರುವಾರ ಸಂಜೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಂದು ಸಂಜೆ 5.25ರ ವೇಳೆಗೆ ಶೋರೂಮ್ನ ಮುಂಭಾಗದಲ್ಲಿರುವ ನೇಮ್ಪ್ಲೇಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈರ್ ಇಂಜಿನ್ ಬರುವಷ್ಟರಲ್ಲಿ ಬೆಂಕಿ ನೇಮ್ಪ್ಲೇಟ್ನ ಒಂದು ಭಾಗವನ್ನು ಸುಟ್ಟು ಹಾಕಿತ್ತು. ಇನ್ನೂ ಬೆಂಕಿ ಹೊತ್ತಿಕೊಂಡ ಬೆನ್ನಲ್ಲೆ ಶೋರೂಮ್ ಸುತ್ತ ಜನರ ಸೇರಿದರು. ಶೂರೂಮ್ ಸಿಬ್ಬಂದಿಗಳು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಅವರ ಬಳಿ ಸಮರ್ಪಕ ಟೂಲ್ಸ್ ಇರಲಿಲ್ಲ. ಅಷ್ಟೊತ್ತಿಕೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು . ಇನ್ನೂ ಸಕಾಲದಲ್ಲಿ ಬೆಂಕಿಯನ್ನು ನಂದಿಸಿದ ಪರಿಣಾಮ ಅದು ಶೋರೂಮ್ನ ಇತರ ಭಾಗಗಳಿಗೆ ವ್ಯಾಪಿಸದೆ ದೊಡ್ಡ ಅನಾಹುತ ತಪ್ಪಿದಂತಾಗಿದೆ. ರಾಹುಲ್ ಹುಂಡೈ ಶೋರೂಮ್ನಲ್ಲಿ ಕಳೆದ 2 ವರ್ಷಗಳ ಹಿಂದೆಯು ಬೆಂಕಿ ಕಾಣಿಸಿಕೊಂಡಿತ್ತು, ಆಗ ದೊಡ್ಡ ಪ್ರಮಾಣದ ಹಾನಿಯಾಗಿತ್ತು. ಅದೃಷ್ಟಕ್ಕೆ ಇವತ್ತು ಅಂಥಹ ದೊಡ್ಡ ಅನಾಹುತ ಸಂಭವಿಸಲಿಲ್ಲ.
ಶಿವಮೊಗ್ಗದ ರಾಹುಲ್ ಹುಂಡೈ ಶೋರೂಮ್ನಲ್ಲಿ ಬೆಂಕಿ
