30 ಕ್ಕೂ ಹೆಚ್ಚು ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, 112 ಎಂಟ್ರಿಯಿಂದ ಉಳಿಯಿತು ಜೀವ?

ಹಂಚಿಕೊಳ್ಳಿ
WhatsApp Facebook X Telegram
112 Police Save Woman in Shivamogga
112 Police Save Woman in Shivamogga

ಶಿವಮೊಗ್ಗ: ಕಾಣೆಯಾದ ವೃದ್ಧರ ಪತ್ತೆ, ಮಣ್ಣಿನಡಿ ಸಿಲುಕಿದವರ ರಕ್ಷಣೆ ಹೀಗೆ ಆಪತ್ತಿನ ಸಮಯದಲ್ಲಿ ಸೂಕ್ತ ವೇಳೆಗೆ ಧಾವಿಸಿ ಜೀವ ಉಳಿಸಿದ್ದ 112 ಪೊಲೀಸರ ಉತ್ತಮ ಕಾರ್ಯಕ್ಕೆ ಮತ್ತೊಂದು ಘಟನೆ ಇದೀಗ ಸೇರ್ಪಡೆಯಾಗಿದೆ. ಅದೇನೆಂದರೆ, ಮಾತ್ರೆಯನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು 112 ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಿಸಿದ್ದಾರೆ.

ಘಟನೆಯ ವಿವರ

112 ಪೊಲೀಸರಿಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಅಪರಿಚಿತರೊಬ್ಬರು ಕರೆ ಮಾಡಿದ್ದರು. ಕರೆ ಮಾಡಿದವರು, ಮಹಿಳೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು 30ಕ್ಕೂ ಹೆಚ್ಚಿನ ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ 112 ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿರುವುದನ್ನು ಅರಿತ ಪೊಲೀಸರು, ತಕ್ಷಣವೇ ಅವರನ್ನು ತಮ್ಮ ವಾಹನದಲ್ಲಿಯೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.

ಇಆರ್‌ಎಸ್‌ಎಸ್‌ (ERSS) ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಗೆ ಶಿವಮೊಗ್ಗ ಜಿಲ್ಲಾ ಪೊಲೀಸರ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor