ಶಿರಾಳಕೊಪ್ಪದಲ್ಲಿ ಬಟ್ಟೆ ಅಂಗಡಿಗೆ ಬೆಂಕಿ ; ₹2 ಕೋಟಿ ಮೌಲ್ಯದ ಸರಕು ಸುಟ್ಟು ನಷ್ಟ

ಹಂಚಿಕೊಳ್ಳಿ
WhatsApp Facebook X Telegram
ಶಿರಾಳಕೊಪ್ಪದ ರೇಂಜ್ 1 ಬಟ್ಟೆ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕದ ದೃಶ್ಯ

ಮಲೆನಾಡು ಟುಡೆ ಸುದ್ದಿ / ಶಿರಾಳಕೊಪ್ಪ / (Shiralkoppa) ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ರೇಂಜ್ 1 ಬಟ್ಟೆ ಅಂಗಡಿಯಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಬರೋಬ್ಬರಿ ₹2 ಕೋಟಿಗೂ ಅಧಿಕ ಮೌಲ್ಯದ ಬಟ್ಟೆ ಹಾಗೂ ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಶಿರಾಳಕೊಪ್ಪದ ರೇಂಜ್ 1 ಬಟ್ಟೆ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕದ ದೃಶ್ಯ

ನಿನ್ನೆ ಭಾನುವಾರ ಮುಂಜಾನೆ ಈ ಅವಘಡ ಸಂಭವಿಸಿದೆ. ನಿನ್ನೆ ಬೆಳಗ್ಗೆ ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಧ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಆದಾಗ್ಯು ಅಷ್ಟರಲ್ಲಿ ಅಂಗಡಿಯಲ್ಲಿ ಬಟ್ಟೆಗಳು ಸುಟ್ಟು ಹೋಗಿದ್ದವು. ಅಂಗಡಿಯಲ್ಲಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳೇ ಅಧಿಕವಾದ್ದರಿಂದ ಹೆಚ್ಚು ನಷ್ಟವಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

ಶಿರಾಳಕೊಪ್ಪದ ರೇಂಜ್ 1 ಬಟ್ಟೆ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕದ ದೃಶ್ಯ

ಲಭ್ಯ ಮಾಹಿತಿ ಪ್ರಕಾರ, ರೇಂಜ್ 1 ಬಟ್ಟೆ ಅಂಗಡಿ ಸಾಗರ ಮೂಲದ ಫಯಾಜ್ ಎಂಬುವವರಿಗೆ ಸೇರಿದ್ದು, ಮುಂಬರುವ ಈದ್ ಮಿಲಾದ್ ಹಬ್ಬದ ವ್ಯಾಪಾರಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹೊಸ ಬಟ್ಟೆಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಆದರೆ ದುರಾದೃಷ್ಟವಶಾತ್​ ಸಂಗ್ರಹಿಸಿಟ್ಟಿದ್ದ ಸರಕುಗಳೆಲ್ಲ ಬೆಂಕಿಗೆ ಆಹುತಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಅಗ್ನಿ ಅವಘಡದಿಂದ ₹2 ಕೋಟಿಗೂ ಅಧಿಕ ನಷ್ಟವಾಗಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.

ಶಿರಾಳಕೊಪ್ಪದ ರೇಂಜ್ 1 ಬಟ್ಟೆ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕದ ದೃಶ್ಯ
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor