ಸಾಗರದ ತುಮರಿಯಲ್ಲಿರುವ ಗೋಪಾಲಗೌಡ ರಂಗಮಂದಿರದ ಪೀಠೋಪಕರಣ ಪುಡಿಪುಡಿ ? ಬೆಂಕಿ ಹಚ್ಚಲು ಯತ್ನ!

ಹಂಚಿಕೊಳ್ಳಿ
WhatsApp Facebook X Telegram
Sagara News Rangamandira Vandalized in Tumari
Sagara News Rangamandira Vandalized in Tumari

ಮಲೆನಾಡುಟುಡೆ ನ್ಯೂಸ್, ಶಿವಮೊಗ್ಗ: ಸಾಗರ ತಾಲೂಕಿನ ತುಮರಿಯಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಸಮಾಜವಾದಿ ದಾರ್ಶನಿಕ ಗೋಪಾಲಗೌಡರ ಹೆಸರಿನಲ್ಲಿದ್ದ ಈ ಸಾಂಸ್ಕೃತಿಕ ಭವನದ ಬಾಗಿಲುಗಳನ್ನು ರಾತ್ರಿ ವೇಳೆಯಲ್ಲಿ ಮುರಿದು ಒಳನುಗ್ಗಿದ ಧುರುಳರು, ಸಾರ್ವಜನಿಕ ಆಸ್ತಿಯನ್ನು ಮನಬಂದಂತೆ ಧ್ವಂಸಗೊಳಿಸಿದ್ದಾರೆ.

ರಂಗಮಂದಿರದ ಒಳಗಿದ್ದ ಬೆಲೆಬಾಳುವ ಪೀಠೋಪಕರಣಗಳನ್ನು ಪುಡಿಪುಡಿ ಮಾಡಿರುವ ದುಷ್ಕರ್ಮಿಗಳು, ಕಟ್ಟಡಕ್ಕೆ ಬೆಂಕಿ ಹಚ್ಚಿ ಪೂರ್ಣಪ್ರಮಾಣದಲ್ಲಿ ನಾಶಪಡಿಸಲು ಯತ್ನ ನಡೆಸಿದ್ದಾರೆ. ಈ ಕೃತ್ಯಕ್ಕೆ ಗ್ರಾಮಸ್ಥರು ಹಾಗೂ ರಂಗಪ್ರೇಮಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಂಗಮಂದಿರದ ಆಡಳಿತ ಮತ್ತು ನಿರ್ವಹಣೆ ನೋಡಿಕೊಳ್ಳುತ್ತಿದ್ದಅಭಿವ್ಯಕ್ತಿ ಬಳಗದ ಪದಾಧಿಕಾರಿಗಳು ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor