ಹಿಟ್​​​ ಆ್ಯಂಡ್​ ರನ್​​ ವ್ಯಕ್ತಿ ಸಾವು, ಕೈಯಲ್ಲಿದೆ ರೂಪ ಹೆಸರಿನ ಹೆಚ್ಚೆ, ಯಾರಿಗಾದರೂ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ

ಹಂಚಿಕೊಳ್ಳಿ
WhatsApp Facebook X Telegram
Shivamogga 112 Police Shivamogga Hit-and-Run Unidentified Man Dies Vehicle Emission Test MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga
Shivamogga 112 Police Shivamogga Hit-Shivamogga Hit-and-Run Unidentified Man Dies and-Run Unidentified Man Dies Vehicle Emission Test MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga

Shivamogga Hit-and-Run ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ಸಂಭವಿಸಿದೆ. ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಶಿವಮೊಗ್ಗ ನಗರ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್‌ನ 65ನೇ ಸಂಸ್ಥಾಪನಾ ದಿನಾಚರಣೆ: ಯುವಶಕ್ತಿಗೆ ನಾಯಕರ ಕರೆ!

ಆಗಸ್ಟ್ 14ರ ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯ ವೇಳೆಯಲ್ಲಿ ನಂದನ್ ಕಾಲೇಜು ಸಮೀಪದ ಕಾಲುದಾರಿಯಲ್ಲಿ ನಡೆದು ಹೋಗುತ್ತಿದ್ದ 50 ರಿಂದ 55 ವರ್ಷ ವಯಸ್ಸಿನ ವ್ಯಕ್ತಿಗೆ ಅಪರಿಚಿತ ವಾಹನವೊಂದು ಜೋರಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ತೀವ್ರವಾಗಿ ಗಾಯಗೊಂಡ ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಮೆಗ್ಗಾನ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮೃತರ ಹೆಸರು ಅಥವಾ ವಾಸಸ್ಥಳದ ವಿವರಗಳು ಇನ್ನೂ ಲಭ್ಯವಾಗಿಲ್ಲ. 

ಮೃತರ ದೈಹಿಕ ಗುರುತುಗಳನ್ನು ಗಮನಿಸುವುದಾದರೆ, ಅವರು ಸುಮಾರು 5.5 ಅಡಿ ಎತ್ತರ, ಸಣ್ಣ ಮೈಕಟ್ಟು, ನೀಳ ಮುಖ ಹಾಗೂ ಗೋಧಿ ಬಣ್ಣದ ಚರ್ಮದ ಮೈಕಾಂತಿಯನ್ನು ಹೊಂದಿದ್ದಾರೆ. ವಿಶೇಷವಾಗಿ ಅವರ ಬಲಗೈನಲ್ಲಿ ರೂಪ ಎಂಬ ಹೆಸರನ್ನು ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳಲಾಗಿದೆ. ಅಪಘಾತದ ಸಮಯದಲ್ಲಿ ಅವರು ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದು, ಕೊರಳಿನಲ್ಲಿ ಕಂದು ಬಣ್ಣದ ಮಣಿಗಳ ಸರವಿತ್ತು. 

ಈ ವ್ಯಕ್ತಿಯ ವಾರಸುದಾರರು, ಸಂಬಂಧಿಕರು ಅಥವಾ ಆತನ ಬಗ್ಗೆ ಯಾವುದೇ ಮಾಹಿತಿ ತಿಳಿದಿರುವವರು ತಕ್ಷಣವೇ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಸಂಚಾರ ವೃತ್ತ ಕಚೇರಿ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 112 ಅನ್ನು ಸಂಪರ್ಕಿಸಬಹುದಾಗಿದೆ. ಜೊತೆಗೆ 08182-261417, 08182-261408, 9480803345, ಅಥವಾ 9480803309 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ವಿವರ ನೀಡುವಂತೆ ಶಿವಮೊಗ್ಗ ಸಂಚಾರಿ ವೃತ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor