ಎಮಿಷನ್​ ಟೆಸ್ಟ್​​ ದರವನ್ನು ಹೆಚ್ಚಿಸಿದ ಸಾರಿಗೆ ಇಲಾಖೆ : ಹೆಚ್ಚಾದ ದರಗಳ ಮಾಹಿತಿ ಹೀಗಿದೆ.

ಹಂಚಿಕೊಳ್ಳಿ
WhatsApp Facebook X Telegram
Vehicle Emission Test MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga
Vehicle Emission Test MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga

ಬೆಂಗಳೂರು: ಕರ್ನಾಟಕದಲ್ಲಿ ಬೈಕ್, ಆಟೋ ಮತ್ತು ಕಾರು ಸೇರಿದಂತೆ ವಿವಿಧ ವರ್ಗದ ವಾಹನಗಳ ಹೊಗೆ ಪರೀಕ್ಷೆ (ಮಾಲಿನ್ಯ ತಪಾಸಣೆ) ದರವನ್ನು ಹೆಚ್ಚಿಸಿ ರಾಜ್ಯ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಹೊಸ  ನಿಯಮದಂತೆ ಕನಿಷ್ಠ 5 ರಿಂದ ಗರಿಷ್ಠ 40 ಗಳವರೆಗೆ ಶುಲ್ಕ ಹೆಚ್ಚಳವಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ. 

ಶಿವಮೊಗ್ಗ ಶಾಸಕರ ಕಚೇರಿ ಎದುರು ಬೃಹತ್ ಪ್ರತಿಭಟನೆ, ಕಾರಣವೇನು

ಈ ಪರಿಷ್ಕೃತ ದರಗಳಿಂದಾಗಿ ಇನ್ಮುಂದೆ ವಾಹನ ಸವಾರರು ತಮ್ಮ ವಾಹನಗಳ ಎಮಿಷನ್ ಟೆಸ್ಟ್ ಮಾಡಿಸಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PCC) ಪಡೆಯಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇಂಧನ ವೆಚ್ಚ ಹಾಗೂ ಉಪಕರಣಗಳ ನಿರ್ವಹಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಿಸುವಂತೆ ಎಮಿಷನ್ ಟೆಸ್ಟಿಂಗ್ ಸೆಂಟರ್ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 

ಕೇಂದ್ರಗಳ ನಿರ್ವಾಹಕರ ಕೋರಿಕೆಯನ್ನು ಪರಿಶೀಲಿಸಿದ ಸಾರಿಗೆ ಇಲಾಖೆಯು ಆಗಸ್ಟ್ 13 ರಂದು ಹೊಸ ದರಗಳ ಕುರಿತು ಅಧಿಸೂಚನೆ ಪ್ರಕಟಿಸಿದೆ. ಇದಕ್ಕೂ ಮುನ್ನ ಅಂತಿಮವಾಗಿ ಏಪ್ರಿಲ್ 2022 ರಲ್ಲಿ ವಾಹನ ಮಾಲಿನ್ಯ ತಪಾಸಣಾ ಶುಲ್ಕವನ್ನು ಸರಿಹೊಂದಿಸಲಾಗಿತ್ತು. ಸುಮಾರು ನಾಲ್ಕು ವರ್ಷಗಳ ಬಳಿಕ ಮತ್ತೆ ದರ ಏರಿಕೆ ಮಾಡಲಾಗಿದೆ. 

Vehicle Emission Test ವಾಹನವಾರು ಪರಿಷ್ಕೃತ ಶುಲ್ಕದ ವಿವರ 

ದ್ವಿಚಕ್ರ ವಾಹನಗಳು: ಹಳೆಯ ಶುಲ್ಕ 65 ಇತ್ತು, ಈಗ 80 ಕ್ಕೆ ಏರಿಕೆಯಾಗಿದೆ (ಹೆಚ್ಚಳ: 15).

ಆಟೋರಿಕ್ಷಾ: ಹಳೆಯ ಶುಲ್ಕ 75 ಇತ್ತು, ಈಗ 80 ಕ್ಕೆ ಪರಿಷ್ಕರಣೆಯಾಗಿದೆ (ಹೆಚ್ಚಳ: 05).

ನಾಲ್ಕು ಚಕ್ರದ ವಾಹನಗಳು (ಪೆಟ್ರೋಲ್/ಸಿಎನ್‌ಜಿ/ಎಲ್‌ಪಿಜಿ): ಹಳೆಯ ಶುಲ್ಕ 115 ಇತ್ತು, ಈಗ 150 ಕ್ಕೆ ಹೆಚ್ಚಳವಾಗಿದೆ (ಹೆಚ್ಚಳ: 35).

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor