ಇಂದಿನ ರಾಶಿಫಲ: ಮೇಷದಿಂದ ಮೀನವರೆಗೆ ದಿನಭವಿಷ್ಯ, ಪಂಚಾಂಗ ಮತ್ತು ರಾಹುಕಾಲದ ಸಮಯ

ಹಂಚಿಕೊಳ್ಳಿ
WhatsApp Facebook X Telegram
ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs
Panchanga and Daily Horoscope February 25, 2026 | February 25, 2026 ರ ಇಂದಿನ ಪಂಚಾಂಗ, ರಾಹುಕಾಲ, ಶುಭ ಮುಹೂರ್ತ ಮತ್ತು 12 ರಾಶಿಗಳ ಸಂಪೂರ್ಣ ದಿನ ಭವಿಷ್ಯ Daily Horoscope

Panchang and Rahu Kalam Timings / ಮಲೆನಾಡು ಟುಡೆ ಸುದ್ದಿ / ಈ ದಿನ ಮೇಷ ರಾಶಿಯವರಿಗೆ ತಮ್ಮದೆ ಆದ ಪ್ರಯತ್ನಗಳಿಂದ ಸಕಾರಾತ್ಮಕ ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ವೃಷಭ ರಾಶಿಯವರು ಮನರಂಜನೆಯತ್ತ ಗಮನ ಹರಿಸುವ ಸಾಧ್ಯತೆ ಇದ್ದು, ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವುದು ಸೂಕ್ತವಾಗಿದೆ. ಮಿಥುನ ರಾಶಿಯವರು ಸ್ವಾರ್ಥ ಹಾಗೂ ಸಂಕುಚಿತ ಮನೋಭಾವದಿಂದ ಹೊರಬಂದು ಕಾರ್ಯನಿರ್ವಹಿಸಲು ಹೆಚ್ಚಿನ ಒತ್ತು ನೀಡಲಿದ್ದಾರೆ.

ಇವತ್ತಿ ರಾಶಿಫಲದ ಸಂಪೂರ್ಣ ವಿವರ

ಮೇಷ ರಾಶಿಯವರಿಗೆ ಪ್ಲಾನಡ್​ ಮತ್ತು ಕ್ರಮಬದ್ಧ ಪ್ರಯತ್ನಗಳಿಂದ ಸಕಾರಾತ್ಮಕ ಫಲಿತಾಂಶ ದೊರೆಯಲಿವೆ. ಕೈಗೊಂಡ ಕೆಲಸಗಳನ್ನು ಪೂರ್ವಯೋಜನೆಯೊಂದಿಗೆ ಮುಂದುವರಿಸುವುದು ಅನುಕೂಲಕರವಾಗಲಿದೆ.

ವೃಷಭ ರಾಶಿಯವರು ಮನರಂಜನೆಗಾಗಿ ಹೊರಗೆ ಹೋಗುವ ಸಾಧ್ಯತೆ ಇದೆ. ಅಗತ್ಯ ಹಾಗೂ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವತ್ತ ಹೆಚ್ಚಿನ ಗಮನ ಹರಿಸುವುದು ಉತ್ತಮ.

ಮಿಥುನ ರಾಸಿಯವರು ಸ್ವಾರ್ಥ ಮತ್ತು ಸಂಕುಚಿತ ಮನೋಭಾವದಿಂದ ಹೊರಬಂದು ಕಾರ್ಯನಿರ್ವಹಿಸುವುದಕ್ಕೆ ಒತ್ತು ನೀಡಲಿದ್ದೀರಿ. ವಿಶಾಲ ದೃಷ್ಟಿಕೋನದೊಂದಿಗೆ ಕೆಲಸಗಳನ್ನು ಮುಂದುವರಿಸುವ ಪ್ರವೃತ್ತಿ ಹೆಚ್ಚಾಗಲಿದೆ.

ಕರ್ಕಾಟಕ ರಾಶಿಯವರು ಸಾಮಾಜಿಕ ಚಟುವಟಿಕೆಗಳನ್ನು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಪ್ರಯತ್ನಗಳಿಗೆ ವೇಗ ದೊರೆಯುವ ಸಾಧ್ಯತೆ ಇದೆ.

ಸಿಂಹ ರಾಶಿಯವರ ಕುಟುಂಬದ ಆಸ್ತಿ-ಪಾಸ್ತಿಯನ್ನು ಸಂರಕ್ಷಿಸುವ ಪ್ರಯತ್ನ ಹೆಚ್ಚಾಗಲಿವೆ. ಮಾತು ಮತ್ತು ನಡವಳಿಕೆ ಪರಿಣಾಮಕಾರಿಯಾಗಿದ್ದು, ನಿಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗಲಿದೆ.

ಕನ್ಯಾ ರಾಶಿಯವರು ಸುತ್ತಮುತ್ತಲಿನ ಅನುಕೂಲಕರ ವಾತಾವರಣ ಉತ್ಸಾಹವನ್ನು ಹೆಚ್ಚಿಸಲಿದ್ದಾರೆ. ಕೆಲಸಗಳಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಲಿದ್ದೀರಿ.

ತುಲಾ ರಾಶಿಯವರು ಕೆಲಸಗಳಲ್ಲಿ ಆಗಬಹುದಾದ ತಪ್ಪು ಮತ್ತು ಅಜಾಗರೂಕತೆಯಿಂದ ದೂರವಿರುವುದು ಉತ್ತಮ. ಪ್ರಮುಖ ವಿಚಾರಗಳಿಗೆ ಮಧ್ಯಾಹ್ನದ ಊಟದ ಬಳಿಕ ವೇಗ ನೀಡುವುದು ಹೆಚ್ಚು ಅನುಕೂಲಕರವಾಗಲಿದೆ.

ವೃಶ್ಚಿಕ ರಾಶಿಯವರು ವಿವಿಧ ಚಟುವಟಿಕೆಗಳನ್ನು ಉತ್ಸಾಹದಿಂದ ಮುಂದುವರಿಸಲಿದ್ದೀರಿ. ಆರ್ಥಿಕ ಗುರಿಗಳನ್ನು ನಿಗದಿತ ಸಮಯದೊಳಗೆ ತಲುಪುವತ್ತ ಪ್ರಯತ್ನಗಳು ಫಲಪ್ರದವಾಗುವ ಸಾಧ್ಯತೆ ಇದೆ.

ಧನು ರಾಶಿಯವರು ಉದ್ಯಮ ಮತ್ತು ಕೆಲಸಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಉತ್ತಮ ನಿರ್ವಹಣೆಯನ್ನು ಕಾಯ್ದುಕೊಳ್ಳಲಿದ್ದೀರಿ. ಕೆಲಸದ ಕಡೆಗೆ ಗಮನ ಮತ್ತಷ್ಟು ಹೆಚ್ಚಾಗಲಿದೆ.

ಮಕರ ರಾಶಿಯವರಿಗೆ ಈ ದಿನ ಉತ್ತಮ ಹಾಗೂ ಪ್ರಮುಖ ಕಾರ್ಯಗಳಿಗೆ ವೇಗ ನೀಡಲು ಸಹಕಾರ ದೊರೆಯಲಿದೆ. ವೃತ್ತಿಪರ ಕ್ಷೇತ್ರದಲ್ಲಿನ ಸಾಧನೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಕುಂಭ: ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ನಿರ್ಲಕ್ಷಿಸಬಾರದು. ದೇಹ ನೀಡುವ ಸೂಚನೆಗಳು ಮತ್ತು ಬದಲಾವಣೆಗಳ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ.

ಮೀನ ರಾಶಿಯವರು ಸಂಜೆಯೊಳಗೆ ತಮ್ಮ ಯೋಜನೆಗಳಿಗೆ ಸೂಕ್ತ ದಿಕ್ಕು ನೀಡಲು ಪ್ರಯತ್ನಿಸುವುದು ಉತ್ತಮ. ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವತ್ತ ಗಮನ ಕೇಂದ್ರೀಕರಿಸುವುದು ಸೂಕ್ತ

ಇಂದಿನ ಪಂಚಾಂಗ

ಶ್ರಾವಣ ಮಾಸದ ಶುಕ್ಲ ಪಕ್ಷ ನಡೆಯುತ್ತಿದೆ. ಶುಕ್ಲ ಪಂಚಮಿ ತಿಥಿಯು ಸುಮಾರು ಸಂಜೆ 04:50 PMರವರೆಗೆ ಇರಲಿದ್ದು, ನಂತರ ಷಷ್ಠಿ ತಿಥಿ ಆರಂಭವಾಗಲಿದೆ. ಚಿತ್ರಾ ನಕ್ಷತ್ರವು ಸುಮಾರು ರಾತ್ರಿ 04:15 AM, ಆಗಸ್ಟ್ 18ರವರೆಗೆ ಇರಲಿದೆ. ಶುಭ ಯೋಗ ಸುಮಾರು ರಾತ್ರಿ 03:55 AM, ಆಗಸ್ಟ್ 18ರವರೆಗೆ ಮುಂದುವರಿಯಲಿದೆ. ರಾಹುಕಾಲ ಸುಮಾರು ಬೆಳಗ್ಗೆ 07:00 AMರಿಂದ 08:39 AMರವರೆಗೆ ಇರಲಿದೆ. ಯಮಗಂಡ ಕಾಲ ಸುಮಾರು ಬೆಳಗ್ಗೆ 10:18 AMರಿಂದ 11:57 AMರವರೆಗೆ ಇರಲಿದೆ. ಗುಳಿಕ ಕಾಲ ಸುಮಾರು ಮಧ್ಯಾಹ್ನ 01:36 PMರಿಂದ 03:15 PMರವರೆಗೆ ಇರಲಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor