ರಾಷ್ಟ್ರೀಯ ಹೆದ್ದಾರಿ 169A ನಲ್ಲಿ ಬಿದ್ದ ದೊಡ್ಡಮರ! ಎಂತೆಲ್ಲಾ ಆಯ್ತು! ವಿವರ ಹೀಗಿದೆ..

ಹಂಚಿಕೊಳ್ಳಿ
WhatsApp Facebook X Telegram
Huge Tree Falls on NH 169A Near Thirthahalli: Traffic Jam for Over an Hour
Huge Tree Falls on NH 169A Near Thirthahalli: Traffic Jam for Over an Hour

NH 169A / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಶಿವಮೊಗ್ಗ-ತೀರ್ಥಹಳ್ಳಿ-ಉಡುಪಿ ಹಾಗೂ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169A ನಲ್ಲಿ ನಿನ್ನೆ ದಿನ ದೊಡ್ಡದೊಂದು ಮರ ಬಿದ್ದು ಅದ್ವಾನ ಆಗಿತ್ತು. ಸುಮಾರು ಹೊತ್ತು ವೆಹಿಕಲ್ ಓಡಾಡೋದಕ್ಕೂ ಆಗದೇ ಸಮಸ್ಯೆ ಆಗಿತ್ತು. ಈ ಬಗೆಗಿನ ವರದಿ ಇಲ್ಲಿದೆ

ದೊಡ್ಡ ಮರವೊಂದು ಮಳೆಯಿಂದಾಗಿ ಸೀದಾ ರಸ್ತೆ ಬಿದ್ದಿದ್ದರಿಂದ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಸಮೀಪದ ಕೋಳಿಗೆ ಬಳಿಈ ಘಟನೆ ನಡೆದಿತ್ತು. ಇದು ಆಗುಂಬೆ ಪೊಲೀಸ್ ಠಾಣೆ ಲಿಮಿಟ್ಸ್​ಗೆ ಬರುತ್ತದೆ.

ನಾಲೂರು-ಕೋಳಿಗೆ ಗ್ರಾಮದ ಬಳಿ ನಡೆದ ಘಟನೆಯಲ್ಲಿ ಬಸ್, ಕಾರು, ಆಂಬ್ಯುಲೆನ್ಸ್ ಸೇರಿದಂತೆ ನೂರಾರು ವಾಹನ ಸಿಲುಕಿಕೊಂಡಿದ್ದವು, ಸುಮಾರು 3 ಕಿಲೋಮೀಟರ್ ಜಾಮ್ ಆಗಿತ್ತು. ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಖುದ್ದಾಗಿ ಮರ ತೆರವು ಮಾಡಲು ಮುಂದಾದ್ರು ನಾಲೂರು ಗ್ರಾಮದ ನಿವಾಸಿಗಳು ಮರ ಕತ್ತರಿಸಿ ತೆಗೆದು ರಸ್ತೆ ಬದಿಗೆ ಸರಿಸಿ ದಾರಿ ಕ್ಲೀಯರ್ ಮಾಡಿಕೊಟ್ಟರು. ಸ್ಥಳೀಯರ ನೆರವಿನ ಬಳಿಕ ಹೆದ್ದಾರಿ ಸಂಚಾರಕ್ಕೆ ಮುಕ್ತವಾಯ್ತು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor