ಕಾಡಿನಲ್ಲಿ ಆತ್ಮ‌ರಕ್ಷಣೆಗಾಗಿ ಅರಣ್ಯ ಸಿಬ್ಬಂದಿಗಳು ನಡೆಸುವ ಗುಂಡಿನ ದಾಳಿ ಎಷ್ಟು ಸತ್ಯ..ಜೆಪಿ ಬರೆಯುತ್ತಾರೆ

ಹಂಚಿಕೊಳ್ಳಿ
WhatsApp Facebook X Telegram
hanur forest encounter
hanur forest encounter


hanur forest encounter / ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆಗಾಗಿ ಕಠಿಣ ಕಾಯ್ದೆ ಕಾನೂನುಗಳನ್ನು ಸರ್ಕಾರ ಜಾರಿಗೊಳಿಸಿರುವುದು ಸ್ವಾಗತಾರ್ಹ ವಿಚಾರವೇ ಆಗಿದೆ. ಕಠಿಣ ನಿಯಮದಿಂದಾಗಿಯೇ ಇಂದು ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆಯ ಪ್ರಗತಿ ಏರುಮಟ್ಡದಲ್ಲಿ ಕಂಡಿದೆ. ಕಾಡು ಮತ್ತು ಕಾಡು ಪ್ರಾಣಿಗಳ ಸಂರಕ್ಷಣೆ ವಿಚಾರದಲ್ಲಿ ಮಾನವನ ಜೀವ ತೆಗೆಯಲು ಕೂಡ ಅರಣ್ಯ ಕಾಯ್ದೆಯಲ್ಲಿ ಮುಕ್ತ ಅವಕಾಶ ಮಾಡಿಕೊಡಲಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಒಬ್ಬ ವ್ಯಕ್ತಿ ಕಾಡು ಪ್ರವೇಶಿಸಿದರೆ ಅದು ಅತಿಕ್ರಮ ಪ್ರವೇಶದ ಕಾಯ್ದೆ ಯಲ್ಲಿ ಬಂಧಿಸಬಹುದಾಗಿದೆ.

ಇಷ್ಟೊಂದು ಕಠಿಣ ನಿಯಮ ಬ್ರಿಟಿಷ್ ಕಾಲದಿಂದಲೇ ಜಾರಿಯಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಇನ್ನು ಕಾಡು ಪ್ರವೇಶಿಸಿ ವನ್ಯ ಪ್ರಾಣಿ ಬೇಟೆಯಾಡಿದರೆ ಅರಣ್ಯ ಸಿಬ್ನಂದಿಗಳು ಬಿಡುತ್ತಾರೆ ಯೇ ? ಪೊಲೀಸ್ ಇಲಾಖೆಗೂ ಇಲ್ಲದ ಕಾನೂನು ಅವಕಾಶ ಅರಣ್ಯ ಇಲಾಖೆಗಿದೆ.ಕಾಡುಗಳ್ಳರ ಹತ್ಯೆ ಗೈದರೆ ಅದಕ್ಕೆ ನೆಪ ಮಾತ್ರದಲ್ಲಿ ವಿಚಾರಣೆಯಾಗುತ್ತದೆ ಹೊರತು ಶಿಕ್ಷೆಗೊಳಗಾದ ಅಧಿಕಾರಿ ಸಿಬ್ಬಂದಿಗಳ ಸಂಖ್ಯೆ ವಿರಳಾತಿ ವಿರಳ.

ಯಾವುದೇ ಹಂತದ ಆಧಿಕಾರಿಗಳು, ನಿವೃತ್ತ ನ್ಯಾಯಾಧೀಶ ರಿಂದ ತನಿಖೆ ನಡೆಸಿದರೂ..ಸಾಕ್ಷ್ಯ ಗಳು ಅರಣ್ಯ ಇಲಾಖೆಗೆ ಪೂರಕವಾಗಿರುತ್ತೆ. ಕಾಡಿನಲ್ಲಿ ನಡೆಯುವ ಗುಂಡಿನ ಕಾಳಗ ನೋಡಿದವರು ಯಾರು ಇರುವುದಿಲ್ಲ. ಆತ್ಮ ರಕ್ಣೆಗಾಗೊ ಗುಂಡು ಹಾರಿಸಿದೆವು ಎನ್ನುವ ಅಧಿಕಾರಿ ಸಿಬ್ಬಂದಿಗಳು , ಘಟನೆ ನಡೆದ ನಂತರ ಅಲ್ಲಿ ಏನೇನು ಸಾಕ್ಷಿಗಳನ್ನು ಸೃಷ್ಟಿಸಬೇಕೋ ಅದನ್ನ ವ್ಯವಸ್ಥಿತವಾಗಿ ಸೃಷ್ಟಿಸಲಾಗುತ್ತದೆ ಎಂಬುದನ್ನ ನಂಬಲರ್ಹ ಮೂಲಗಳೇ ಹೇಳುತ್ತವೆ. ಬೇಟೆಯಾದರೆ ಮಾಂಸ ಮತ್ತು ಬಂದೂಕು ಸ್ಥಳದಲ್ಲಿ ಲಭ್ಯವಾಗುತ್ತವೆ..ಮರಗಳ್ಳರಾದರೆ ಮರ ಮತ್ತು ಗರಗಸಗಳು ಸಾಕ್ಷ್ಯ ನುಡಿಯುವಂತೆ ಮಾಡಲಾಗುತ್ತದೆ…

ಸ್ವಚ್ವ ಸಮಾಜದಲ್ಲಿರುವ ರೌಡಿಗಳ ಕಾಲಿಗೆ ಗುಂಡು ಹೊಡೆಯಲು ಪೊಲೀಸರು ಕಾನೂನಿನಲ್ಲಿ ಅವಕಾಶ ಇದ್ದರೂ. ಸಾವಿರ ಸಲ ಯೋಚಿಸುತ್ತಾರೆ..ಘಟನೆ ನಂತರ ಎದುರಿಸಬೆದಕಾದ ಇಲಾಖೆ ವಿಚಾರಣೆ ಮಾನವ ಹಕ್ಕುಗಳ ಅಯೋಗದಂತ ವಿಚಾರಗಳಿಗೆ ತಲೆ ಕೊಡಬೇಕಾಗುತ್ತದೆ. ಪೊಲೀಸರ ಎನ್ಕೌಂಟರ್ ಗಳು ನಕಲಿ ಎಂದು ಸಬೀತಾಗಿ ಐಪಿಎಸ್ ಅಧಿಕಾರಿಗಳೇ ತಲೆದಂಡವಾಗಿರುವ ಉದಾಹರಣೆ ಗಳು ಕಣ್ಣ ಮುಂದಿವೆ…

ಆದರೆ ಅರಣ್ಯ ಇಲಾಖೆಯಿಂದಾಗುವ ಗುಂಡಿನ‌ ಚಕಮಕಿಗಳಿಗೆ ಶಿಕ್ಷೆಗಳಾದ ಉದಾಹರಣೆ ಕಡಿಮೆ..ಇದಕ್ಕೆ ಕಾರಣ..ಕಾಡಿನಲ್ಲಾದ ಘಟನೆಗೆ ಸಾಕ್ಷಿ ಎಂಬುವುದಧ ಇರುವುದಿಲ್ಲ..ಈಗ ಚಾಮರಾಜ ನಗರ ಹನೂರು ತಾಲ್ಲೂಕಿನ ಕಾಡಿನಲ್ಲಿ ಮೂವರು ಬೇಟೆಗಾರರನ್ನು ಪ್ರತಿದಾಳಿ ಎಂದು ಗುಂಡು ಹಾರಿಸಿ ಹತ್ಯೆ ಗೈಯಲಾಗಿದೆ.. ಇದು ನಿಜವೇ ಆದಲ್ಲಿ ಸಿಬ್ಮಂದಿಗಳು ಬೇರೆ ಮಾರ್ಗ ಅನುಸರಿಸಬಹುದಿತ್ತು. ಬೇಟೆಗಾರರ ಕಾಲಿಗೆ ಗುಂಡು ಹಾರಿಸಬಹುದಿತ್ತು..

ಕಾಡಿನ ಪರಿಸರವಾಗಿದ್ದರಿಂದ ಸಿಬ್ಬಂದಿಗಳು ಮರಗಳಲ್ಲಿ ಅವಿತು ರಕ್ಷಣೆ ಪಡೆಯ ಬಹುದಿತ್ತು..ಆದರೆ ಏಕಾಏಕಿ ದೇಹದ ಮೇಲೆ ಗುಂಡು ಹಾರಿಸಿ ಹತ್ಯೆ ಗೈದಿದ್ದು ಯಾವ ನ್ಯಾಯ. ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ಹಲವು ಎನ್ಕೌಂಟರ್ ಗಳು ಕಾಡಿನ‌ ಪರಿಸರದಲ್ಲಿ ನಡೆದಿದೆ…ಸಿಬ್ನದಿಗಳು ಕಾಲಿಗೆ ಗುಂಡು ಹೊಡೆದ ಕರುಗಳೇ ಇಲ್ಲ..ದೇಹದ ಮೇಲೆ ನೇರವಾಗಿ ಗುಂಡು ಹಾರಿಸಿ ಅಮಾನೀಯವಾಗಿ ಕೊಲ್ಲಲಾಗಿದೆ. ಸತ್ತವರು ಮರ ಕಡಿದವರೆ ಆಗಿದ್ದವರೆ ಹೊರತು, ಅವರೇನು ಅತ್ಯಾಚಾರ ಗೈದವರಲ್ಲ..ಕೊಲೆ ಮಾಡಿದವರಲ್ಲ..ಟೆರರಿಸ್ಟ್ ಗಳಲ್ಲ..ನಕ್ಸಲರಲ್ಲ..ಕೇವಲ ಮರ ಕಡಿದರು..ಪ್ರಾಣಿ ಬೇಟೆಯಾಡಿದರು ಎಂಬ ಕಾರಣಕ್ಕೆ ಗುಂಡು ಹಾರಿಸುವುದು ಯಾವ ನ್ಯಾಯ…

ಮೊದಲೇ ಹೇಳಿದಂತೆ ಗುಂಡು ಹಾರಿಸುವ ಅನಿವಾರ್ಯತೆ ಎದುರಾಗಿದ್ದರೆ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಜೈಲಿಗಟ್ಟ ಬಹುದಿತ್ತು..ಅರಣ್ಯ ಇಲಾಖೆಯ ಎನ್ಕೌಂಟರ್ ಗಳನ್ನ ಸರ್ಕಾರಗಳು ಸಮರ್ಥಿಸಿಕೊಂಡೇ ಬಂದಿವೆ. ಆದರೆ ಹನೂರು ಬೇಟೆಗಾರರ ಹತ್ಯೆ ಘಟನೆ ಇಲಾಖೆಯ ಕಾಯ್ದೆ ಕಾನೂನುಗಳ ತಿದ್ದುಪಡಿಯಾಗಬೇಕೆಂದು ಸಾರಿ ಹೇಳುತ್ತಿದೆ. ಸರ್ಕಾರ ಈ ಘಟನೆಯನ್ನು ಸಮರ್ಥಿಸಿಕೊಳ್ಳುವ ಬದಲು ಅರಣ್ಯ ಅಧೊಕಾರಿಗಳ ಕಿವಿ ಹಿಂಡುವ ಕೆಲಸ ಮಾಡಲಿ..

ಒಂದು ಕಾಲದಲ್ಲಿ ಬೇಟೆ ಎಂಬುದು ಒಂದು ಸಂಸ್ಕೃತಿಯ ಭಾಗವಾಗಿತ್ತು ಎಂಬುದನ್ನು ಸರ್ಕಾರ ಮರಡಯ ಬಾರದಿತ್ತು…ಹಾಗಂತ ಕಾಡುಬೇಟೆ ಸಮರ್ಥಿಸಿಕೊಳ್ಳುತ್ತಿಲ್ಲ..ಕಾಡುಗಳ್ಳರ ಬಂಧನಕ್ಕೆ ಸಾದುನೀಕ‌ ಪರ್ಯಾಯ ಮಾರ್ಗ ಸರ್ಕಾರ ಕಂಡುಕೊಳ್ಳಬೇಕಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor