ಗುಟ್ಕಾ ಬ್ಯಾನ್‌ಗೆ ಬ್ರೇಕ್? ಆದೇಶ ಹಿಂಪಡೆಯಲು ಸಿಎಂ ಸೂಚನೆ! ಏನಿದು ಹೊಸ ವಿಚಾರ! ತಿಳಿಯಿರಿ

ಹಂಚಿಕೊಳ್ಳಿ
WhatsApp Facebook X Telegram
Karnataka Gutka Ban May Be Withdrawn as Arecanut Growers Raise Concerns
Karnataka Gutka Ban May Be Withdrawn as Arecanut Growers Raise Concerns

Karnataka Gutka Ban / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆ, ಸಂಗ್ರಹ, ಸಾಗಣೆ, ವಿತರಣೆ ಮತ್ತು ಮಾರಾಟವನ್ನ ಒಂದು ವರ್ಷದ ಅವಧಿಗೆ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ಸದ್ಯದಲ್ಲಿಯೇ ಹಿಂಪಡೆಯಲಿದೆ. ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್​ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ..

ಸ್ಟೇಟ್​ ಮೀಡಿಯಾಗಳ ಖಚಿತ ವರದಿಯ ಪ್ರಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಗುಟ್ಕಾ ನಿಷೇಧ ಆದೇಶವನ್ನು ಶೀಘ್ರ ಹಿಂಪಡೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಅಡಿಕೆ ಬೆಳೆಗಾರರ ಮೇಲಿನ ಕಾಳಜಿಯಿಂದ ಸಿಎಂ ಡಿಕೆ ಶಿವಕುಮಾರ್​ ಈ ನಿರ್ದಾರ ಕೈಗೊಂಡಿದ್ದಾರಂತೆ. ಗುಟ್ಕಾ ನಿಷೇಧದ ಬೆನ್ನಲ್ಲೆ ಸ್ವತಃ ಕಾಂಗ್ರೆಸ್​ ಮುಖಂಡರಿಂದಲೇ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಈ ಬಗ್ಗೆ ಸಚಿವ ಸಂಪುಟದಲ್ಲಿಯು ಚರ್ಚೆಯಾಗಿತ್ತು. ಈ ವೇಳೆ ಆರೋಗ್ಯ ಇಲಾಖೆ ಮುಖ್ಯ ಅಧಿಕಾರಿಯನ್ನ ಕರೆಸಿಕೊಂಡ ಸಿಎಂ ಡಿಕೆ ಶಿವಕುಮಾರ್, ಇಂತಹದ್ದೊಂದು ದೊಡ್ಡ ಆದೇಶ ಹೊರಡಿಸುವಾಗ ತಮ್ಮ ಗಮನಕ್ಕೆ ಏಕೆ ತರಲಿಲ್ಲ. ಇನ್ಮೇಲೆ ಮುಖ್ಯವಾದ ಆದೇಶಗಳನ್ನು ತಮ್ಮ ಗಮನಕ್ಕೆತರಬೇಕು ಎಂದು ಸೂಚಿಸಿದ್ದಾರೆ. ಬಳಿಕ ಗುಟ್ಕಾ ನಿಷೇಧದ ಆದೇಶವನ್ನು ಹಿಂಪಡೆಯಿರಿ ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ , ನಿಷೇಧ ಅಧಿಕೃತವಾಗಿ ಹಿಂಪಡದ ಹೊಸ ಸರ್ಕಾರಿ ಆದೇಶ ಇನ್ನೂ ಪ್ರಕಟವಾಗಿಲ್ಲ.

ಇನ್ನೂ ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ ಆಗಸ್ಟ್ 13ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಗುಟ್ಕಾ ನಿಷೇಧ ಆದೇಶವನ್ನು ವಾಪಸ್ ಪಡೆಯುವಂತೆ ಮನವಿ ಸಲ್ಲಿಸಿತ್ತು,. ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಸಂಸದ ಬಿ.ವೈ ರಾಘವೇಂದ್ರ ಸಹ ಸರ್ಕಾರಕ್ಕೆ ಡೆಡ್​ಲೈನ್ ನೀಡಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಇದೀಗ ಡಿಕೆ ಶಿವಕುಮಾರ್ ಸೂಚನೆ ಕಾರ್ಯ ಸಾಧುವಾಗುತ್ತ ಎಲ್ಲರ ಚಿತ್ತ ನೆಟ್ಟಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor