Ripponpete / ಮಲೆನಾಡು ಟುಡೆ ಸುದ್ದಿ / ರಿಪ್ಪನ್ಪೇಟೆ / ಮಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದ 10 ವೀಲ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಹೊಂಡಕ್ಕೆ ಬಿದ್ದ ಘಟನೆ ನಿನ್ನೆದಿನ ವರದಿಯಾಗಿದೆ. ರಿಪ್ಪನ್ ಪೇಟೆ ಹತ್ರ ಅರಸಾಳು ಕೆರೆ ಏರಿ ಸಮೀಪ ಘಟನೆ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಡ್ರೈವರ್ ಪಾರಾಗಿದ್ದಾರೆ.
ಲಾರಿಯು ಅರಸಾಳು ಕೆರೆ ಏರಿ ಮೇಲೆ ಸಾಗುತ್ತಿದ್ದಾಗೆ ಎದುರಿಗೆ ಬೈಕ್ ಅಡ್ಡ ಬಂದಿದೆ. ಅದಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸಲು ಡ್ರೈವರ್ ರೈಟಿಗೆ ಎಳೆದಿದ್ದಾನೆ. ಆ ಬಳಿಕ ಕಂಟ್ರೋಲ್ಗೆ ಸಿಗದ ಲಾರಿ ಸೀದಾ, ರಸ್ತೆಬದಿಗೆ ಇಳಿದು ಹೊಂಡಕ್ಕೆ ಜಾರಿದೆ. ಘಟನೆ ನಂತರ ಪೊಲೀಸ್ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಗಾಡಿ ಮೇಲೆಕ್ಕೆ ಎತ್ತಿಸಿದ್ದಾರೆ.
