ಸುದ್ದಿಯ ಸ್ಥಳ: Shivamogga district, Karnataka
Mysore Manja / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಮಂಗಳೂರು/ ಶಿವಮೊಗ್ಗದಲ್ಲಿ ಅಡ್ರೆಸ್ ಬದಲಿಸಿಕೊಂಡು ತಲೆಮರೆಸಿಕೊಂಡಿದ್ದರೂ ಆರೋಪಿಯೊಬ್ಬ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಶಿವಮೊಗ್ಗದಲ್ಲಿಯು ವಿವಿಧ ಕೇಸ್ಗಳಿಗೆ ಬೇಕಾಗಿದ್ದ ಆರೋಪಿ ಮೈಸೂರು ಮಂಜ ಕಂಕನಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಅಕ್ರಮವಾಗಿ ಮಾರಕಾಸ್ತ್ರ ಹೊಂದಿದ್ದ ಆರೋಪದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಹಾಜರಾಗದ ವಿಚಾರದಲ್ಲಿ ಮಂಜ ಅಲಿಯಾಸ್ ಮೈಸೂರು ಮಂಜನನ್ನು ಕಂಕನಾಡಿ ಟೌನ್ ಪೊಲೀಸರು ಶಿವಮೊಗ್ಗ ನಗರದಲ್ಲಿ ಪತ್ತೆಮಾಡಿ ಕರೆದೊಯ್ದಿದ್ದಾರೆ. ಆಗಸ್ಟ್ 11ರಂದು ಶಿವಮೊಗ್ಗದ ಕೆಇಬಿ ಕಾಲೋನಿ ಬಳಿ ಆರೋಪಿಯನ್ನು ಪತ್ತೆಹಚ್ಚಿದ ಕಂಕನಾಡಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಈತ ಕೋರ್ಟ್ನಲ್ಲಿ ನೀಡಿದ ವಿಳಾಸ ಬಿಟ್ಟು ಬೇರೆ ಕಡೆಯಲ್ಲಿ ವಾಸವಿದ್ದ. ವಾಸದ ವಿಳಾಸ ಬದಲಾದ ಹಿನ್ನೆಲೆಯಲ್ಲಿ ಆರೋಪಿ ಪತ್ತೆಯಾಗಿರಲಿಲ್ಲ. ಹೀಗಾಗಿ ಶಿವಮೊಗ್ಗ ನಗರದಲ್ಲಿ ಆರೋಪಿಗಾಗಿ ಅಲ್ಲಿನ ಪೊಲೀಸರು ಹುಡುಕಾಟ ನಡೆಸ್ತಿದರು. ಈ ಮಧ್ಯೆ ಕ್ಲೂ ವೊಂದು ಸಿಕ್ಕ ಹಿನ್ನೆಲೆಯಲ್ಲಿ ಕೆಇಬಿ ಕಾಲೋನಿ ಬಳಿ ಈತನನ್ನ ಅರೆಸ್ಟ್ ಮಾಡಿದೆ. ಮಂಜ ಅಲಿಯಾಸ್ ಮೈಸೂರು ಮಂಜ ವಿರುದ್ಧ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿವೆ ಎನ್ನಲಾಗಿದೆ. ಈ ಸಂಬಂಧ ವಿಚಾರಣೆ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈತನ ವಿರುದ್ಧ ದಾಖಲಾದ ಪ್ರಕರಣಗಳನ್ನು ತಲಾಶ್ ಮಾಡಿದ್ದ ಕಂಕನಾಡಿ ಪೊಲೀಸರು, ಈತನ ಬಗ್ಗೆ ಕ್ಲೂ ಪಡೆದಿದ್ದರು.
