ಕೋಣಂದೂರು: ಆಗಸ್ಟ್ 15 ಮತ್ತು 16ರಂದು ಶಿವಮೊಗ್ಗ ಜಿಲ್ಲಾ ಸಾಹಿತ್ಯೋತ್ಸವ – ಎಸ್‌ಎಸ್‌ಎಫ್ ಆಯೋಜನೆ

ಹಂಚಿಕೊಳ್ಳಿ
WhatsApp Facebook X Telegram
Shivamogga District Sahityotsava in Konandur
Shivamogga District Sahityotsava in Konandur

Shivamogga ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಹಿತ್ಯಿಕ ಪ್ರತಿಭೆ, ಸೃಜನಶೀಲತೆ ಹಾಗೂ ಬೌದ್ಧಿಕ ಚಿಂತನೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ವತಿಯಿಂದ ಬೃಹತ್ ಶಿವಮೊಗ್ಗ ಜಿಲ್ಲಾ ಸಾಹಿತ್ಯೋತ್ಸವವನ್ನು ಆಯೋಜಿಸಲಾಗಿದೆ. 

ಶಿವಮೊಗ್ಗ: ಆ. 10 ರಂದು ಶಿವಪ್ಪ ನಾಯಕ ವೃತ್ತದಲ್ಲಿ ಕಿಸಾನ್ ಮೋರ್ಚಾ ಬೃಹತ್ ರಸ್ತೆ ತಡೆ, ಕಾರಣವೇನು? 

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಬೆಜ್ಜವಳ್ಳಿಯ ಹಸನ್ ಸಖಾಫಿ ಅವರು, ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿರುವ ಈ ಕಲಾ ಹಬ್ಬವು ಆಗಸ್ಟ್ 15 ಮತ್ತು 16ರಂದು ಕೋಣಂದೂರಿನಲ್ಲಿ ನೆರವೇರಲಿದೆ ಎಂದು ತಿಳಿಸಿದರು. 

ಈ ಬಾರಿಯ ಸಾಹಿತ್ಯೋತ್ಸವಕ್ಕೆ ಕನ್ನಡದ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ವಿಜೇತ, ಮಲೆನಾಡಿನ ಮಹಾಕವಿ ಕುವೆಂಪು ಅವರ ಜ್ಞಾನವೇ ಮನುಷ್ಯನ ನಿಜವಾದ ಸಂಪತ್ತು ಎಂಬ ಅರ್ಥಪೂರ್ಣ ಹಾಗೂ ಶ್ರೇಷ್ಠ ವಿಚಾರವನ್ನು ಮುಖ್ಯ ಶೀರ್ಷಿಕೆಯನ್ನಾಗಿ ಇರಿಸಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ನೂರಾರು ವಿದ್ಯಾರ್ಥಿಗಳು ಹಾಗೂ ಸ್ಪರ್ಧಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಲಿದ್ದಾರೆ. 

ಈ ಜ್ಞಾನೋತ್ಸವದಲ್ಲಿ ಕವನ ಸಂಕಲನ, ಪ್ರಬಂಧ ರಚನೆ, ವಾಗ್ಮಿತ್ವ, ಚಿತ್ರಕಲೆ ಸೇರಿದಂತೆ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಕಲಾ ಕುಟುಂಬ, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಿಂದ ಆರಂಭಗೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗೂ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಲಾ ಕೌಶಲ ಹಾಗೂ ವೈಚಾರಿಕ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. 

ಇಂದಿನ ಡಿಜಿಟಲ್ ಹಾಗೂ ಆನ್‌ಲೈನ್ ಯುಗದಲ್ಲಿ ಯುವಜನತೆಯಲ್ಲಿ ಕಳೆದುಹೋಗುತ್ತಿರುವ ಓದುವ ಹವ್ಯಾಸ, ತಾರ್ಕಿಕ ಚಿಂತನೆ, ಬರವಣಿಗೆ, ಸೃಜನಶೀಲತೆ ಮತ್ತು ಮಾತುಗಾರಿಕೆಯನ್ನು ಮರುಸ್ಥಾಪಿಸಲು ಈ ವೇದಿಕೆ ಸಹಕಾರಿಯಾಗಲಿದೆ. ಬೌದ್ಧಿಕವಾಗಿ ಸಶಕ್ತವಾದ ವಿದ್ಯಾರ್ಥಿ ಸಮುದಾಯವನ್ನು ನಿರ್ಮಿಸುವ ಎಸ್‌ಎಸ್‌ಎಫ್‌ನ ಆಶಯಕ್ಕೆ ಸಾಹಿತ್ಯೋತ್ಸವವು ದೊಡ್ಡ ಹೆಜ್ಜೆಯಾಗಿದೆ. 

ಇಸ್ಲಾಂ ಧರ್ಮವು ಜ್ಞಾನಾರ್ಜನೆ, ಓದು, ಸತ್ಯಾನ್ವೇಷಣೆ ಮತ್ತು ವೈಚಾರಿಕ ಚಿಂತನೆಗೆ ಉನ್ನತ ಸ್ಥಾನ ನೀಡಿದೆ. ಪಡೆದ ಜ್ಞಾನವನ್ನು ಸಮಾಜದ ಪ್ರಗತಿ ಹಾಗೂ ಒಳಿತಿಗಾಗಿ ಬಳಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಹಸನ್ ಸಖಾಫಿ ಪ್ರತಿಪಾದಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor