2 ಸಾವಿರಕ್ಕಿಂತ ಹೆಚ್ಚಿನ upi ಪಾವತಿಗೆ ಬೀಳುತ್ತೆ  ಶುಲ್ಕ, ಯಾರಿಗೆ ಅನ್ವಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಹಂಚಿಕೊಳ್ಳಿ
WhatsApp Facebook X Telegram
UPI Fee Above 2k New MDR Rule & Impact
UPI Fee Above 2k New MDR Rule & Impact

UPI Fee Above 2k ಮಲೆನಾಡುಟುಡೆ ನ್ಯೂಸ್: ಮುಂಬರುವ ದಿನಗಳಲ್ಲಿ ಯುಪಿಐ ಮುಖಾಂತರ ಹಣ ಸ್ವೀಕರಿಸುವ ವರ್ತಕರು ನಿಗದಿತ ಮಿತಿಯ ನಂತರ ಬ್ಯಾಂಕುಗಳಿಗೆ ತಕ್ಕಮಟ್ಟಿನ ಸೇವಾ ಶುಲ್ಕವನ್ನು ಪಾವತಿಸಬೇಕಾಗಿ ಬರಬಹುದು. ಕೇಂದ್ರ ಹಣಕಾಸು ಸಚಿವಾಲಯವು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007ಕ್ಕೆ ಸೂಕ್ತ ತಿದ್ದುಪಡಿ ತರಲು ಲೋಕಸಭೆಯಲ್ಲಿ ಕರಡು ಮಸೂದೆಯನ್ನು ಮಂಡಿಸಿದೆ.

ಶಿವಮೊಗ್ಗ :  ಗುಡ್ಡೇಕಲ್​​  ಜಾತ್ರೆಗೆ ಡೇಟ್​ ಫಿಕ್ಸ್​​ : ಯಾವಾಗ ?

 ಈ ಮಸೂದೆಯು ಯುಪಿಐ ಹಾಗೂ ರೂಪೇ (RuPay) ಕಾರ್ಡ್‌ಗಳ ಬಳಕೆಯ ವಹಿವಾಟಿನ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅಥವಾ ಕಮಿಷನ್ ಶುಲ್ಕವನ್ನು ವಿಧಿಸುವ ಅವಕಾಶವನ್ನು ಹೊಂದಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಯಾವುದೇ ಸೇವಾದಾರರು ಅಥವಾ ಬ್ಯಾಂಕುಗಳು ಯುಪಿಐ ವಹಿವಾಟಿಗೆ ಶುಲ್ಕ ವಸೂಲಿ ಮಾಡುವಂತಿಲ್ಲ. ಆದರೆ, ಈ ನೂತನ ಮಸೂದೆ ಸಂಸತ್ತಿನಲ್ಲಿ ಸಮ್ಮತಿ ಪಡೆದರೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ.

ಈ ಹೊಸ ನಿಬಂಧನೆಯು ಸಾಧಾರಣ ಸಾರ್ವಜನಿಕರ ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಹಣ ವರ್ಗಾವಣೆಗೆ ಅಥವಾ ನಿತ್ಯದ ಸಣ್ಣಪುಟ್ಟ ಖರೀದಿಗಳಿಗೆ ಯಾವುದೇ ರೀತಿಯಲ್ಲೂ ಅನ್ವಯಿಸುವುದಿಲ್ಲ. ಸಾರ್ವಜನಿಕರು ಪರಸ್ಪರ ಕಳುಹಿಸುವ ಹಣ ಹಾಗೂ ಕಿರಾಣಿ, ತರಕಾರಿ, ಹಣ್ಣು ಇತ್ಯಾದಿ ದೈನಂದಿನ ವಸ್ತುಗಳ ಖರೀದಿಯ ಮೇಲೆಯೂ ಇದು ಪರಿಣಾಮ ಬೀರದು. ಇದು ಸಂಪೂರ್ಣವಾಗಿ ಉದ್ಯಮ ಅಥವಾ ವ್ಯಾಪಾರ ಸಂಸ್ಥೆಗಳಿಗೆ ಸಂಬಂಧಿಸಿದ ವಹಿವಾಟುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರಮುಖವಾಗಿ, ವಾರ್ಷಿಕವಾಗಿ 15 ಕೋಟಿ ರೂಪಾಯಿಗಿಂತಲೂ ಅಧಿಕ ವಹಿವಾಟು ನಡೆಸುವ ಬೃಹತ್ ಮಟ್ಟದ ವ್ಯಾಪಾರಿಗಳನ್ನು ಮಾತ್ರ ಈ ಶುಲ್ಕದ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. 

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಶುಲ್ಕ ವಿನ್ಯಾಸದ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಯುಪಿಐ ಮೂಲಕ ನಡೆಯುವ 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಡಿಜಿಟಲ್ ಪಾವತಿಗಳಿಗೆ ಮಾತ್ರವೇ ಈ ಶುಲ್ಕ ಅನ್ವಯಿಸಲಿದೆ. ವಹಿವಾಟಿನ ಶೇಕಡಾ 0.2 ರಿಂದ 0.3 ರಷ್ಟು ಪ್ರಮಾಣದಲ್ಲಿ ಈ ದರ ನಿರ್ಧಾರವಾಗುವ ಸಾಧ್ಯತೆಯಿದ್ದು, ಪ್ರತಿ 100 ರೂಪಾಯಿಗೆ ಅಂದಾಜು 20 ರಿಂದ 30 ಪೈಸೆಗಳಷ್ಟು ಕಡಿತವಾಗಲಿದೆ. ಇದು ಆನ್‌ಲೈನ್ ಪಾವತಿ ಮಾಡುವ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ ಎಂಬುದು ಗಮನಾರ್ಹ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor